ಅಖಂಡ ಕರ್ನಾಟಕ ರಾಜ್ಯ ರೈತ ಸಂಘ ಪರಶುರಾಂಪುರ ಹೋಬಳಿ ಘಟಕ ನಮ್ಮದೇ ನೈಜ ಸಂಘಟನೆ: ಸಿ ಚಿಕ್ಕಣ್ಣ

ಚಳ್ಳಕೆರೆ:
ತಾಲೂಕಿನಲ್ಲಿ ಅಖಂಡ ಕರ್ನಾಟಕ ರಾಜ್ಯ ರೈತ ಸಂಘವನ್ನು ಪರಶುರಾಂಪುರ ಹೋಬಳಿಯಲ್ಲಿ ಬಿರುಕು ಮೂಡಿಸಿ ಹೊಸ ಸಂಘಟನೆಯನ್ನು ರಚಿಸಲು ಹೊರಟಿರುವುದು ಖಂಡನೀಯ ಎಂದು ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಸಿ ಚಿಕ್ಕಣ್ಣ ಆಕ್ರೋಶ ವ್ಯಕ್ತಪಡಿಸಿದರು. 

ನಗರದ ಪ್ರವಾಸಿ ಮಂದಿರದ ಆವರಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು ಪರಶುರಾಂಪುರ ಹೋಬಳಿಯ ಸಮಸ್ಯೆಗಳನ್ನು ನಮ್ಮ ಸಂಘಟನೆ ವತಿಯಿಂದ ಹೋರಾಟಗಳನ್ನು ಹಮ್ಮಿಕೊಂಡು ತಾಲೂಕು ಹಾಗು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ತಲುಪಿಸಿ ಸಮಸ್ಯೆಗಳಿಗೆ ಪರಿಹಾರವನ್ನು ಕೊಡಿಸಿ ಹೋಬಳಿಯಲ್ಲಿ ಸಾರ್ವಜನಿಕರಿಂದ ಉತ್ತಮ ಪ್ರಶಂಸೆ ಪಡೆದಿದ್ದೇವೆ ಆದರೆ ಸೋಮಗದ್ದು ರಂಗಸ್ವಾಮಿಯವರು ಪರಶುರಾಂಪುರ ಹೋಬಳಿಯ ರೈತ ಸಂಘಟನೆಯಲ್ಲಿ ಒಡಕು ಮೂಡಿಸಿ ಹೊಸ ಪದಾಧಿಕಾರಿಗಳನ್ನು ನೇಮಿಸಿರುವುದು ಸರಿ ಇರಲಿಲ್ಲ ರಾಜ್ಯ ಸಂಘಟನೆ ನಮಗೆ ಅವಕಾಶ ನೀಡಿದ್ದು ರೈತ ಸಂಘವನ್ನು ಇನ್ನಷ್ಟು ಬಲಿಷ್ಠ ಗೊಳಿಸುವಂತೆ ಸೂಚಿಸಿದೆ ಅದರಂತೆ ಮುಂದಿನ ಕಾರ್ಯ ಕ್ರಮಗಳನ್ನು ರೂಪಿಸಲಿದ್ದು ಎಂದಿನಂತೆ ರೈತ ಪರವಾಗಿ ಹೋರಾಟಗಳಲ್ಲಿ ಪಾಲ್ಗೊಳ್ಳಲು ತಿಳಿಸಿದೆ ಎಂದು ತಿಳಿಸಿದರು. 

ಇದೇ ವೇಳೆ ಪತ್ರಿಕಾ ದಿನಾಚರಣೆಯ ಅಂಗವಾಗಿ ಮಾತನಾಡಿದ ರೈತ ಮುಖಂಡರು ಸಂವಿಧಾನದ ನ್ಯಾಯಾಂಗ ಶಾಸಕಾಂಗ ಹಾಗೂ ಕಾರ್ಯಾಂಗ ಸರಿಯಾದ ರೀತಿಯಲ್ಲಿ ಕಾರ್ಯ ನಿರ್ವಹಿಸದೆ ಇದ್ದ ಪಕ್ಷದಲ್ಲಿ ಅವುಗಳನ್ನು ಎಚ್ಚರಿಸುವ ಕೆಲಸವನ್ನು ಸಂವಿಧಾನದ ನಾಲ್ಕನೇ ಅಂಗವಾದ ಮಾಧ್ಯಮ ರಂಗ ಅವುಗಳ ಕಿವಿ ಹಿಂಡುವ ಮೂಲಕ ಎಚ್ಚರಿಸುತ್ತವೆ ದೇಶದಲ್ಲಿ ರೈತರ ಸಮಸ್ಯೆಗಳ ಬಗ್ಗೆ ಹಾಗೂ ಹೋರಾಟಗಳನ್ನು ಹಮ್ಮಿಕೊಂಡಾಗ ಮೊದಲು ಬೆಂಬಲವಾಗಿ ನಿಲ್ಲುವುದು ಮಾಧ್ಯಮ ರಂಗವಾಗಿದೆ ಇಂತಹ ಮಹತ್ವದ ಕಾರ್ಯವನ್ನು ನಿರ್ವಹಿಸುವ ಮಾಧ್ಯಮದ ಪ್ರತಿನಿಧಿಗಳಿಗೆ ಸರ್ಕಾರ ಮೂಲಭೂತ ಸೌಲಭ್ಯಗಳನ್ನು ಒದಗಿಸುವ ಮೂಲಕ ಅವರ ಜೀವನವನ್ನು ಉತ್ತಮಪಡಿಸಬೇಕು ಎಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ರೈತ ಮುಖಂಡರಾದ ರಾಜಣ್ಣ ಶಾಂತಣ್ಣ ಜಂಪಣ್ಣ ನವೀನ್ ಗೌಡ ಪರಮೇಶ್ವರಪ್ಪ ಭಾಷಾ ರಾಘವೇಂದ್ರ ಖಾದರ್ ಭಾಷಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Namma Challakere Local News
error: Content is protected !!