ಚಳ್ಳಕೆರೆ: ಶಾಲಾ ಪ್ರಾರಂಭೋತ್ಸವದ ಅಂಗವಾಗಿ ತಾಲ್ಲೂಕಿನ ನನ್ನಿವಾಳ ಗ್ರಾಮದಲ್ಲಿ ಶಾಲಾ ಮಕ್ಕಳನ್ನು ಅದ್ದೂರಿಯಗಿ ಅಲಂಕಾರಗೊಳಿಸಿದ ಎತ್ತಿನಗಾಡಿಯಲ್ಲಿ ಮೆರವಣಿಗೆ ನಡೆಸಿ ಶಾಲೆಗೆ ಸ್ವಾಗತಿಸಿದರು.

ಇಂದು ಶಾಲೆಗಳು ಆರಂಭವಾದ ಹಿನ್ನಲೆಯಿಂದ ನನ್ನಿವಾಳ ಗ್ರಾಮದಲ್ಲಿ ಮಕ್ಕಳನ್ನು ಶಾಲೆಗೆ ಬರಮಾಡಿಕೊಳ್ಳಲು ಗ್ರಾಮದಲ್ಲಿ ಹಬ್ಬದ ವಾತವರಣವೆ ನಿರ್ಮಾಣವಾಗಿತ್ತು, ಗ್ರಾಮದ ಶಾಲಾ ಮಕ್ಕಳು ಬಣ್ಣ-ಬಣ್ಣದ ಸ್ಯಾರಿ ಉಟ್ಟು ಕುಂಭಮೇಳದೊಂದಿಗೆ ಶಾಲಾ ಪ್ರಾರಂಭೋತ್ಸವ ಹಾಗೂ ದಾಖಲಾತಿ ಆಂದೋಲನ ಕಾರ್ಯಕ್ರಮಕ್ಕೆ ಆಗಮಿಸಿದ ಶಾಸಕ ಟಿ.ರಘುಮೂರ್ತಿ ಬರಮಾಡಿಕೊಂಡರು.

ನನ್ನಿವಾಳ ಗ್ರಾಮದ ಪಾದಗಟ್ಟೆ ಬಳಿ ಅಲಂಕಾರಗೊಳಿಸಿದ ಎತ್ತಿನಗಾಡಿಗಳಲ್ಲಿ ಶಾಸಕ. ಟಿ.ರಘುಮೂರ್ತಿ ಹಾಗೂ ಶಾಲಾ ಮಕ್ಕಳನ್ನು ಹತ್ತಿಸಿಕೊಂಡು ತಮಟೆ ವಾದ್ಯಗಳು ಮತ್ತು ಕುಂಭಮೇಳದೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರೆವಣಿಗೆ ಸಾಗಿಬಂದು ಶಾಲೆಯ ಬಳಿ ಶಾಸಕರಿಗೆ, ಶಾಲಾ ಮಕ್ಕಳಿಗೆ ಜೆಸಿಬಿ ಯಂತ್ರದ ಮೂಲಕ ಹೂವು ಮಳೆ ಸುರಿಸಿ, ಪಟಾಕಿ ಸಿಡಿಸಿ ವೇದಿಕೆ ಕಾರ್ಯಕ್ರಮಕ್ಕೆ ಸ್ವಾಗತಿಸಿದರು.

*ರಾರಾಜಿಸಿದ ಶಿಕ್ಷಣ ಜಾಗೃತಿ ಫಲಕಗಳು:


  • ಶಾಲಾ ಪ್ರಾರೊಂಭೋತ್ಸವ ಅಂಗವಾಗಿ ಶಾಲಾ ಮಕ್ಕಳು, ಬಸವೇಶ್ವರ, ವನಿಕೆ ಓಬವ್ವ, ವೀರ ಯೋಧರ ಸೇರಿದಂತೆ ಮಹಾನ್ ನಾಯಕರ ವೇಷಗಳು ಧರಿಸಿದ್ದು ಒಂದು ಕಡೆ ಬಂದರೆ, ಮತ್ತೊಂದು ಕಡೆ ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಅರಿವೇ ಗುರುವು, ಗುರುವೇ ಶಿಕ್ಷಣ, ಶಿಕ್ಷಣವೇ ಶಕ್ತಿ, ಚಿನ್ನಕಿಂತ ಅಕ್ಷರ ಲೇಸು ಎನ್ನುವಂತಹ ಶಿಕ್ಷಣ ಜಾಗೃತಿ ಫಲಕಗಳು ಮಕ್ಕಳ ಕೈಯಲ್ಲಿ ರಾರಾಜಿಸಿದವು.

ಮನೆ ಮುಂದೆಯೇ ಮಕ್ಕಳ ಶಾಲೆಗೆ ದಾಖಲು:

ನೂತನವಾಗಿ ಪ್ರಸಕ್ತ ಸಾಲಿಗೆ ದಾಖಲಾಗುವ ಮಕ್ಕಳನ್ನು ತಮ್ಮ- ತಮ್ಮ ಮನೆಗಳ ಮುಂದೆಯೇ ಮಕ್ಕಳನ್ನು ಶಾಸಕ ಟಿ.ರಘುಮೂರ್ತಿ, ಬಿಇಓ ಕೆ.ಎಸ್. ಸುರೇಶ್ ಹಾಗೂ ಶಾಲೆ ಮುಖ್ಯ ಶಿಕ್ಷಕರಿಗೆ ದಾಖಲಾತಿ ಪ್ರತಿ ನೀಡಿ ಪೋಷಕರ ತಮ್ಮ ಮಕ್ಕಳನ್ನು ಶಾಲೆಗೆ ದಾಖಲು ಮಾಡಿರುವುದು ವಿಶೇಷವಾಗಿತ್ತು.

ಶಾಲಾ ಮಕ್ಕಳ ಮೆರವಣಿಗೆ ಕಾರ್ಯಕ್ರಮದಲ್ಲಿ ಶಾಸಕ ಟಿ.ರಘುಮೂರ್ತಿ, ಗ್ರಾಪಂ ಅಧ್ಯಕ್ಷ ಬಸವರಾಜು, ಗ್ರಾಪಂ ಸದಸ್ಯ ಚಿನ್ನಯ್ಯ, ಬೈಯಣ್ಣ,ಜಿನ್ನಿ ಬೈಯಣ್ಣ ಬಿಇಓ ಕೆ.ಎಸ್. ಸುರೇಶ್, ಜಿಲ್ಲಾ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಮಾರುತೇಶ್, ತಾಲೂಕು ಸಂಘದ ಅಧ್ಯಕ್ಷ ವಿರೇಶ್, ಕಾರ್ಯದರ್ಶಿ ಹೆಚ್.ಹನುಮಂತಪ್ಪ, ಪಿಡಿಓ ಪಾಲಯ್ಯ ಹಾಗೂ ಶಾಲಾ ಶಿಕ್ಷಕರ ಅನಿತಾ, ಗ್ರಾಮಸ್ಥರು ಇದ್ದರು.

Namma Challakere Local News
error: Content is protected !!