ಚಳ್ಳಕೆರೆ : ಪವಿತ್ರ ಬುದ್ದಪೂರ್ಣಿಮದ ಈ ದಿನ ಶಿಕ್ಷಕರು ಗುರುಗಳಾಗಿ ಪರಿವರ್ತನೆ ಯಾಗಬೇಕು ಸೃಜನಶೀಲರಾಗಿ ಮಕ್ಕಳಿಗೆ ಬೋಧನೆ ಮಾಡುವುದರ ಜೊತೆಗೆ ಬದಲಾವಣೆಗಳ ಅನುಸಾರ ನಿರಂತರ ಗುರುವಿನ ಅಂತ ತಲುಪಬೇಕೆಂದು ಎಂದು ತಹಶೀಲ್ದಾರ್ ಎನ್ ರಘುಮೂರ್ತಿ ಹೇಳಿದ್ದಾರೆ
ಚಳ್ಳಕೆರೆ ತಾಲ್ಲೂಕಿನ ಬೋಗನಹಳ್ಳಿ ಗ್ರಾಮದಲ್ಲಿ ಶಿಕ್ಷಣ ಇಲಾಖೆ ಹಾಗೂ ಗ್ರಾಮ ಪಂಚಾಯಿತಿ ದೇವರೆಡ್ಡಿಹಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಮರಳಿ ಬಾ ಶಾಲೆಗೆ ಪರಿಕಲ್ಪನೆ ಅಡಿಯಲ್ಲಿ ವರ್ಷದ ಮೊದಲ ದಿನ ಶಾಲಾ ಮಕ್ಕಳನ್ನು ಶಾಲೆಗೆ ಕರೆತರುವ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ಈ ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆಯಲ್ಲಿ 150 ಮಕ್ಕಳಿದ್ದು ಈ ಮಕ್ಕಳು ಯಾವುದೇ ಕಾರಣಕ್ಕೂ ಶಾಲೆಯಿಂದ ಹೊರಗುಳಿಯಬಾರದು ಪೋಷಕರು ಮತ್ತು ಶಿಕ್ಷಕರು ಈ ಬಗ್ಗೆ ವಿಶೇಷವಾದ ಕಾಳಜಿ ವಹಿಸಬೇಕು
ಧನಾತ್ಮಕವಾದ ಅಂತ ಚಿಂತನೆಗಳನ್ನು ಅಳವಡಿಸಿಕೊಳ್ಳಿ ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಸಂಬಂಧ ವಿಶ್ವಾಮಿತ್ರ ಹಾಗೂ ರಾಮಲಕ್ಷ್ಮಣರದ್ಫು ರಾಮಕೃಷ್ಣ ಪರಮಹಂಸರು ಮತ್ತು ವಿವೇಕಾನಂದರದ್ದು ಸುಬ್ರಮಣ್ಯ ಅಯ್ಯರ್ ಮತ್ತು ಅಬ್ದುಲ್ ಕಲಾಂರದ್ದು ಸಾಕ್ರೆಟಿಸ್ ಮತ್ತು ಪ್ಲೋಟೋರಂತಹ ಆಗಿರಬೇಕು ಮಕ್ಕಳನ್ನು ಕೀಳಿರಿಮೆಯಿಂದ ಕಾಣಬೇಡಿ,
ಶಿಕ್ಷಕರ ಚಲನವಲನಗಳನ್ನು ವಿದ್ಯಾರ್ಥಿಗಳು ಸೂಕ್ಷ್ಮವಾಗಿ ಗಮನಿಸುತ್ತಿರುತ್ತಾರೆ ಇದರ ಬಗ್ಗೆಯೂ ಎಚ್ಚರವಿರಬೇಕು ಚಳ್ಳಕೆರೆ ತಾಲೂಕಿನ ಗಡಿಭಾಗದ ಇಂತಹ ಶಾಲೆಗಳಲ್ಲಿ ಶಾಲೆಗಳಿಗೆ ಮೂಲಭೂತ ಸೌಕರ್ಯ ಹಾಗೂ ಗುಣಮಟ್ಟದ ಶಿಕ್ಷಣವನ್ನು ನೀಡುವುದು ಸರ್ಕಾರದ ಗುರಿಯಾಗಿದೆ
ಅದರಂತೆ ಶಾಲೆಗೆ 5 ಲಕ್ಷ ರೂ ವೆಚ್ಚದಲ್ಲಿ ಅತ್ಯುನ್ನತ ಗುಣಮಟ್ಟದ ಮೂಲ ಸೌಕರ್ಯಗಳಾದ ವೈಫೈ ಪವರ್ ಪಿಪಿಟಿ ಕಂಪ್ಯೂಟರ್ ಡಿಜಿಟಲ್ ಲೈಬ್ರರಿ ಮುಂತಾದ ವ್ಯವಸ್ಥೆಯನ್ನು ದಾನಿಗಳಿಂದ ಒದಗಿಸುತ್ತಿದ್ದು ಸಾರಿಗೆ ಸಚಿವರು ಮುಂದಿನ ದಿನಗಳಲ್ಲಿ ಈ ಶಾಲೆಗೆ ಬಂದು ಲೋಕಾರ್ಪಣೆ ಮಾಡಲಿದ್ದಾರೆ
ಹಾಗೆ ಇದೇ ಮಾದರಿಯ 20 ಶಾಲೆಗಳಲ್ಲಿ ಇಂತಹ ಸೌಲಭ್ಯವನ್ನು ಕಲ್ಪಿಸುವಂತೆ ಸೂಚನೆ ನೀಡಿದ್ದಾರೆ ಶಿಕ್ಷಕರುಗಳು ಕ್ರಿಯಾತ್ಮಕವಾಗಿ ಮಕ್ಕಳಿಗೆ ಗುಣಾತ್ಮಕ ಮತ್ತು ಆಧುನಿಕ ಶಿಕ್ಷಣ ಒದಗಿಸುವ ನಿಟ್ಟಿನಲ್ಲಿ ಅವುಗಳ ಬದಲಾವಣೆಯಾಗಬೇಕು ಶಿಕ್ಷಕರ ಕೊರತೆಯಿದ್ದು ಕ್ಷೇತ್ರಶಿಕ್ಷಣಾಧಿಕಾರಿಗಳ ಜೊತೆ ಚರ್ಚಿಸಲಾಗಿದೆ
ಕೊರತೆ ಇರುವ ಒಬ್ಬ ಶಿಕ್ಷಕನನ್ನು ತಕ್ಷಣ ಶಾಲೆಗೆ ಒದಗಿಸುವುದಾಗಿ ಹೇಳಿದ್ದಾರೆ ಮುಂದಿನ ದಿನಗಳಲ್ಲಿ ಗಡಿಭಾಗದ ಎಲ್ಲಾ ಶಾಲೆಗಳಿಗೂ ಆಧುನಿಕ ಶಿಕ್ಷಣ ವ್ಯವಸ್ಥೆಯ ಸೌಕರ್ಯಗಳನ್ನು ಕಲ್ಪಿಸಲಾಗುವುದು
ಪೋಷಕರು ಯಾವುದೇ ಕಾರಣಕ್ಕೂ ಮಕ್ಕಳನ್ನು ಶಾಲೆ ಬಿಡಿಸದೆ ಪ್ರೇರೇಪಿಸಬೇಕು ಎಂದು ಹೇಳಿದರು
ಬೆಳಿಗ್ಗೆಯಿಂದಲೇ 4 ಎತ್ತಿನ ಗಾಡಿಯಲ್ಲಿ ಮಕ್ಕಳನ್ನು ಚುನಾಯಿತ ಪ್ರತಿನಿಧಿಗಳು ಮತ್ತು ಸರ್ಕಾರಿ ಅಧಿಕಾರಿಗಳು ವಿವಿಧ ಕಲಾ ತಂಡದಿಂದ ಶಾಲೆಯವರಿಗೆ ಮೆರವಣಿಗೆಯಲ್ಲಿ ತಂದು ಎಲ್ಲಾ ಮಕ್ಕಳಿಗೂ ಹೂವು ಮಳೆ ಸುರಿಸುತ್ತಾ ಸಿಹಿಯನ್ನು ತಿನ್ನಿಸುವುದರ ಮೂಲಕ ಸ್ವಾಗತಿಸಲಾಯಿತು
ತಹಸಿಲ್ದಾರ ರಘುಮೂರ್ತಿ ಅವರು ಮಕ್ಕಳಿಗೆ ಸಿಹಿಯನ್ನು ತಿನ್ನಿಸುವುದನ್ನು ಜೊತೆಗೆ ಸ್ವಾಗತಿಸಿದರು ಗ್ರಾಮದಲ್ಲಿ ಹಬ್ಬದ ವಾತಾವರಣ ಮೂಡಿತ್ತು ಗ್ರಾಮದ ಪ್ರತಿಯೊಬ್ಬರು ಸಡಗರದಿಂದ ಕುಣಿದು ಕುಪ್ಪಳಿಸಿದರು
ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯತಿ ಅಧ್ಯಕ್ಷ ಲಕ್ಷ್ಮೀದೇವಮ್ಮ, ತಾಲೂಕು ಪಂಚಾಯತಿ ಸಹಾಯಕ ನಿರ್ದೇಶಕ ಸಂತೋಷ್, ಗ್ರಾಮ ಪಂಚಾಯತಿ ಸದಸ್ಯ ಭೋಗನಹಳ್ಳಿ ಪ್ರಹ್ಲಾದ್, ಮತ್ತಿತರು ಸಮಾರಂಭದಲ್ಲಿ ಉಪಸ್ಥಿತರಿದ್ದರು