ಚಳ್ಳಕೆರೆ ನ್ಯೂಸ್ :
ಆರೋಪಿ ಅನುಕುಮಾರ್ ಕುಟುಂಬ ಭೇಟಿ ಮಾಡಿದ
ನಾರಾಯಣ್
ರೇಣುಕಾ ಸ್ವಾಮಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬೆಂಗಳೂರಿನ
ಬಿಬಿಎಂಪಿ ಸ್ಥಾಯಿ ಸಮಿತಿ ಮಾಜಿ ಅಧ್ಯಕ್ಷ ನಾರಾಯಣ್
ಅವರು,
ಚಿತ್ರದುರ್ಗದ ಆರೋಪಿ ಅನು ಕುಮಾರ್ ಮನೆಗೆ
ತೆರಳಿ ಅವರ ಕುಟುಂಬಕ್ಕೆ ಧೈರ್ಯ ಹೇಳಿದರು.
ಆಟೋ ಓಡಿಸಿ
ಬದುಕು ನಡೆಸುತ್ತಿದ್ದ ಅನುಕುಮಾರ್ ಆರೋಪಿಯಾಗಿದ್ದು,
ಇದೀಗ ಮನೆಯಲ್ಲಿ ಯಾರೂ ದುಡಿಯುವವರಿಲ್ಲವಾಗಿದೆ.
ಈ
ವಿಷಯ ತಿಳಿದ ನಾರಾಯಣ್ ಅವರು 40 ಸಾವಿರ ಧನ ಸಹಾಯ
ಮಾಡಿದರು. ಈ ಸಮಯದಲ್ಲಿ ಜೆ ಡಿ ಎಸ್ ನ ಯುವ ಘಟಕದ
ಮುಖಂಡ ಪ್ರತಾಪ್ ಜೋಗಿ ಇನ್ನಿತರರಿದ್ದರು.