ಚಳ್ಳಕೆರೆ ನ್ಯೂಸ್ :

ಶಿಕ್ಷಕರ ಅರ್ಹತಾ ಪರೀಕ್ಷೆಯ ಮೊದಲ ಅಧಿವೇಶನ ಪರೀಕ್ಷೆ
(Tet exmaination) ಜೂ. 30 ರಂದು ಬೆಳಿಗ್ಗೆ 9.30 ರಿಂದ ಮಧ್ಯಾಹ್ನ 12
ರವರೆಗೆ 15 ಕೇಂದ್ರಗಳಲ್ಲಿ ನಡೆಯಲಿದ್ದು, ಒಟ್ಟು 4,235 ಅಭ್ಯರ್ಥಿಗಳು
ಪರೀಕ್ಷೆ ಬರೆಯುವರು. ಎರಡನೇ ಅಧಿವೇಶನದ ಪರೀಕ್ಷೆಯು ಮಧ್ಯಾಹ್ನ
2 ಗಂಟೆಯಿಂದ 4.30 ರವರೆಗೆ 27 ಕೇಂದ್ರಗಳಲ್ಲಿ ನಡೆಯಲಿದ್ದು, 7,317
ಅಭ್ಯರ್ಥಿಗಳು ಪರೀಕ್ಷೆ ಬರೆಯುವರು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಂ.ನಾಸೀರುದ್ದೀನ್
ತಿಳಿಸಿದರು.

ಪ್ರಶ್ನೆ ಪತ್ರಿಕೆಗಳನ್ನು ತಲುಪಿಸಲು ಮಾರ್ಗಾಧಿಕಾರಿಗಳಿಗೆ ವಾಹನಗಳನ್ನು
ಒದಗಿಸಬೇಕು. ಪ್ರತಿ ಪರೀಕ್ಷಾ ಕೇಂದ್ರಕ್ಕೆ ಇಬ್ಬರಂತೆ ಎಲ್ಲಾ ಕೇಂದ್ರಗಳಿಗೆ
ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ಹಾಗೂ ಪರೀಕ್ಷಾ
ಕೇಂದ್ರದ ಸುತ್ತಲೂ 200 ಮೀಟರ್ ಪ್ರದೇಶವನ್ನು 144 ಸೆಕ್ಷನ್ ಪ್ರಕಾರ
ನಿಷೇಧಿತ ಪ್ರದೇಶವೆಂದು ಘೋಷಣೆ ಮಾಡಬೇಕು. ಪರೀಕ್ಷಾ ಮುಗಿದ
(Tet exmaination) ನಂತರ ಓ.ಎಂ.ಆರ್ ಉತ್ತರ ಪತ್ರಿಕೆಗಳನ್ನು
ಕೇಂದ್ರ ಕಚೇರಿಗೆ ಸಾಗಿಸುವ ವಾಹನಕ್ಕೆ ಮಾರ್ಗಾಧಿಕಾರಿ ಜೊತೆಗೆ ಒಬ್ಬ
ಪೊಲೀಸ್ ಸಿಬ್ಬಂದಿ ನೇಮಿಸುವಂತೆ ಮನವಿ ಮಾಡಿದರು.

About The Author

Namma Challakere Local News
error: Content is protected !!