ಚಳ್ಳಕೆರೆ: ಕಳೆದ ಎರಡು ವರ್ಷಗಳ ಕಾಲ ಕೊವಿಡ್ ಕಾರಣದಿಂದ ಜಾತ್ರೆಗಳು, ಹಬ್ಬ ಹರಿದಿನಗಳು ನಡೆಯದೆ ಕೇವಲ ಪೂಜಾ ವಿಧಿವಿಧಾನಗಳು ಮಾತ್ರ ನಡೆದಿದ್ದವು,
ಇನ್ನೂ ಭಕ್ತರ ದರ್ಶನಕ್ಕೂ ಕೂಡ ಅವಕಾಶ ಇರಲಿಲ್ಲ ಆದರೆ ಈ ಬಾರಿ ಈಡೇರಿಸುವ ನಗರದ ಆರಾಧ್ಯದೈವ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಸಾವಿರಾರು ಭಕ್ತಾದಿಗಳು ಸಮ್ಮುಖದಲ್ಲಿ ನೆರವೆರಲಿದೆ.
ಜಾತ್ರೆ ಅಂಗವಾಗಿ ದನಗಳ ಜಾತ್ರೆ ಕೂಡ ನಡೆಯಲಿದೆ. ವೀರಭದ್ರಸ್ವಾಮಿಗೆ ಏಕಾದಶಿ, ಹೋಮ, ರುದ್ರಾಭಿಷೇಕ ಹಾಗೂ ಕಂಕಣಧಾರಣೆ,
ದೊಡ್ಡ ರಥಕ್ಕೆ ಕಳಸ ಪ್ರತಿ ಸ್ಥಾಪನೆ,
ಪುರಂತರ ವೀರನಾಟ್ಯ, ಸ್ವಾಮಿಯ
ಪಲ್ಲಕ್ಕಿಯ ಉತ್ಸವ ನಡೆಯಲಿದೆ.
ಶನಿವಾರ ಬೆಳಿಗ್ಗೆ ತೈಲಾಭಿಷೇಕ,
ಪುಷ್ಪಾರ್ಚನೆ, ವೀರಭದ್ರಸ್ವಾಮಿಯ
ಉತ್ಸವಮೂರ್ತಿಯನ್ನು ಬೆಳ್ಳಿ
ಪಲ್ಲಕ್ಕಿಯಲ್ಲಿ ಗಂಗಾ ಪೂಜೆಗೆ
ಕೊಂಡೊಯ್ಯಲಾಯಿತು.
ರಾತ್ರಿ ದೇವಸ್ಥಾನದ ಮುಂಭಾಗದಲ್ಲಿ ಅಂದೋಳಿಕೋತ್ಸವ ಜರುಗಿತು.
ಇನ್ನೂ ಇಂದು
ಭಾನುವಾರ ಬೆಳಗಿನ ಜಾವ
ದ್ದು 3.30ಕ್ಕೆ ಅಗ್ನಿಕುಂಡ ಹಾಗೂ ಪುರಂತರ
ವೀರ ನಾಟ್ಯ ನಡೆಯಿತು.
ಇಂದು ಮಧ್ಯಾಹ್ನ
3.30 ಗಂಟೆಗೆ ದೊಡ್ಡ ರಥೋತ್ಸವ ಜರುಗಲಿದೆ.