ಚಳ್ಳಕೆರೆ : ಬಯಲು ಸೀಮೆಯಲ್ಲಿ ಶಿಕ್ಷಣಕ್ಕೆ ಹೆಚ್ಚಿನ ಮಹತ್ವ ನೀಡುವ ಮೂಲಕ ಕ್ಷೇತ್ರದ ತುಂಬೆಲ್ಲಾ ಶಾಲಾ ಕಾಲೇಜುಗಳ ಕಟ್ಟಡಗಳ ನಿರ್ಮಾಣಕ್ಕೆ ಕೈ ಹಾಕಿರುವ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಬಡ ಮಕ್ಕಳ ಶಿಕ್ಷಣಕ್ಕೆ ಮಹತ್ವದ ನೀಡಿದ್ದಾರೆ.
ಅದರಂತೆ ಬೆಸಿಗೆಯ ರಜೆ ಮುಗಿಸಿ ಇನ್ನೇನು ಶಾಲೆ ಕಡೆ ಮುಖ ಮಾಡುವ ವಿದ್ಯಾರ್ಥಿಗಳ ಹಿತ ದೃಷ್ಟಿಯಿಂದ ಕಟ್ಟಡಗಳ ದುರಸ್ತಿ ಹಾಗೂ ನೂತನ ಶಾಲಾ ಕಟ್ಟಡಗಳು ಈಗೇ ಪ್ರತಿ ಗ್ರಾಮದಲ್ಲಿ ಮಕ್ಕಳ ವಿದ್ಯಾರ್ಜನೆಗೆ ಒತ್ತು ನೀಡುವುದರ ಮೂಲಕ ಶಿಕ್ಷಣದ ಕ್ರಾಂತಿ ನಡೆಸಿದ್ದಾರೆ.
ಇಂದು ಚಳ್ಳಕೆರೆ ತಾಲೂಕಿನ ಸಾಣಿಕೆರೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಹೆಗ್ಗೆರೆ ಗ್ರಾಮದಲ್ಲಿ ಪ್ರಕಾಶ್ ಐರನ್ ಸ್ಪಾಂಜ್ ಕಂಪನಿವತಿಯಿಂದ ನಿರ್ಮಿಸುತ್ತಿರುವ ಸುಮಾರು 60 ಲಕ್ಷ ವೆಚ್ಚದಲ್ಲಿ ನಾಲ್ಕು ನೂತನ ಶಾಲಾ ಕೊಠಡಿಯ ಭೂಮಿ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಭೂಮಿ ಪೂಜೆ ನೆರವೆರಿಸಿದ್ದಾರೆ.
ಈದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಹಾಗೂ ಪಕ್ಷದ ಮುಖಂಡರು ಮತ್ತು ಸಾರ್ವಜನಿಕರು, ಹಾಜರಿದ್ದರು