ಚಳ್ಳಕೆರೆ: ರೈತರು ಕೊವಿಡ್ ಸಂಕಷ್ಟದ ಪರಿಸ್ಥಿತಿಯಲ್ಲಿ ಅನೇಕ ಕಷ್ಟದ ಪರಿಸ್ಥಿತಿ ಎದುರಿಸುತ್ತಿದ್ದಾರೆ, ಒಂದು ಕಡೆ ಪ್ರಕೃತಿ ವಿಕೋಪದಿಂದ ಬೆಳೆ ಉಳಿಸಿಕೊಳ್ಳುವ ಪ್ರಯತ್ನ ಮತ್ತೊಂದೆಡೆ ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಇರುವುದು ಈಗಿದ್ದರು ಕೂಡ ಸರಕಾರ ಬೆಳೆದ ಬೆಳೆಗೆ ಬೆಳೆ ಪರಿಹಾರ ಕೂಡ ಸರಿಯಾದ ಸಮಯಕ್ಕೆ ನೀಡದೆ ಇರುವುದು ರೈತರನ್ನು ಸಂಕಷ್ಟಕ್ಕೆ ದೂಡಿದೆ ಎಂದು ರೈತ ಸಂಘದ ಹಸಿರು ಸೇನೆ
ರಾಜ್ಯ ಮುಖಂಡ ರೆಡ್ಡಿಹಳ್ಳಿ ವೀರಣ್ಣ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪಸಲ್ ಬಿಮಾ
ಯೋಜನೆಯಡಿ ಬೆಳೆ ವಿಮೆ ಹಾಗೂ
ಬೆಳೆನಷ್ಟ ಪರಿಹಾರ ಒದಗಿಸಬೇಕು

ಅಕ್ರಮವಾಗಿ
ಸಂಪಾದಿಸಿದ ಕೋಟಿ ಕೋಟಿ
ಕಾರ್ಪೋರೇಟ್ ಕಂಪನಿಗೆ ಕೊಟ್ಟು
ರೈತರನ್ನು ಗುಲಾಮರನ್ನಾಗಿ ಮಾಡಲು ಸರ್ಕಾರ ಹೊರಟಿವೆ’ ಎಂದು ಆರೋಪಿಸಿದರು.

ತಾಲ್ಲೂಕು ಘಟಕದ ಅಧ್ಯಕ್ಷ
ಶ್ರೀಕಂಠಮೂರ್ತಿ ಮಾತನಾಡಿ, ತಾಲ್ಲೂಕಿನಲ್ಲಿ 200 ಗ್ರಾಮದ ರೈತರು ಕೃಷಿ ಅವಲಂಬಿಸಿ
ಜೀವನ ನಡೆಸುತ್ತಿದ್ದಾರೆ. ಬೆಳೆ ವಿಮೆ
ನೀಡದ ಕಾರಣ ಅವರ ಕುಟುಂಬ
ನಿರ್ವಹಣೆ ಕಷ್ಟವಾಗಿದೆ’ ಎಂದರು.

ರೈತ ಮುಖಂಡ ಜಿ.ಎಚ್.
ಹನುಮಂತಪ್ಪ, ‘ರೈತರ ವಿವಿಧ
ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಮೇ 17ರಂದು ತಾಲ್ಲೂಕು ಕಚೇರಿ ಎದುರು ಧರಣಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗಿದೆ‌
ಎಂದು ತಿಳಿಸಿದರು.

ಈದೇ ಸಂಧರ್ಭದಲ್ಲಿ ಗಿರಿಯಮ್ಮನಹಳ್ಳಿ ತಿಪ್ಪೇಸ್ವಾಮಿ,
ವರವು ತಿಪ್ಪೇಸ್ವಾಮಿ, ತಾಲ್ಲೂಕು
ಪ್ರಧಾನ ಕಾರ್ಯದರ್ಶಿ ವಡೆರಹಳ್ಳಿ
ಬಸವರಾಜ, ರಾಜಣ್ಣ, ಜಯಣ್ಣ ಇದ್ದರು.

Namma Challakere Local News
error: Content is protected !!