ಗ್ರಾಮೀಣ ಪ್ರದೇಶದ ಪ್ರತಿಯೊಬ್ಬರು ಸದೃಢ ಆರೋಗ್ಯದತ್ತ ಗಮನ ಕೊಡಿ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಶೇಷಾದ್ರಿ ನಾಯಕ್.
ನಾಯಕನಹಟ್ಟಿ:: ಜೂನ್ .20 .
ಜೀವನಶೈಲಿಯಲ್ಲಿ ಹಲವು ತಪ್ಪುಗಳು ಮನುಷ್ಯನನ್ನು ಅನಾರೋಗ್ಯಕ್ಕೆ ತಳ್ಳುತ್ತದೆ ಎಂದು.ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಆರೋಗ್ಯ ನಿರೀಕ್ಷಣಾಧಿಕಾರಿ ಶೇಷಾದ್ರಿ ನಾಯಕ್ ಹೇಳಿದ್ದಾರೆ.
ಗುರುವಾರ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಶ್ರೀ ಬಸವೇಶ್ವರ ವೈದ್ಯಕೀಯ ಕಾಲೇಜು ಹಾಗು ಆಸ್ಪತ್ರೆ ಚಿತ್ರದುರ್ಗ ಉಚಿತ ಆರೋಗ್ಯ ತಪಾಸಣೆ ಶಿಬಿರ ನಡೆಸಲಾಯಿತು.
ಶಿಬಿರದಲ್ಲಿ ಪಾಲ್ಗೊಂಡು ಗ್ರಾಮೀಣ ಪ್ರದೇಶದ ರೋಗಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಿಂದ ಸಾಕಷ್ಟು ರೋಗಗಳು ಶಿಬಿರದಲ್ಲಿ ಪಾಲ್ಗೊಂಡಿರುವುದು ಸಂತಸ ತಂದಿದೆ.
ಪರಿಸರ ನಾಶದಿಂದ ಕಲುಷಿತ ವಾತಾವರಣ ಸೃಷ್ಟಿಯಾಗುತ್ತಿದ್ದು ಅದು ಮನುಷ್ಯನ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ ಜೀವನ ಶೈಲಿಯಲ್ಲಿ ಹಲವು ತಪ್ಪುಗಳು ಮನುಷ್ಯನನ್ನು ಅನಾರೋಗ್ಯಕ್ಕೆ ತಳ್ಳುತ್ತದೆ.
ಉತ್ತಮ ಆರೋಗ್ಯಕ್ಕಾಗಿ ಸಾಧ್ಯವಾದಷ್ಟು ಶಿಸ್ತಿನ ಜೀವನ ನಡೆಸುತ್ತಾ ಪೌಷ್ಟಿಕಾಂಶಯುಕ್ತ ಆಹಾರ ಬಳಸುತ್ತ ಎಲ್ಲರೂ ಸದೃಢ ಆರೋಗ್ಯದತ್ತ ಗಮನ ನೀಡಬೇಕು ಆರೋಗ್ಯವಂತರ ಸಂಖ್ಯೆ ಆಧಾರದ ಮೇಲೆ ದೇಶ ಅಭಿವೃದ್ಧಿಯು ಸಾಧ್ಯವಾಗುವುದು ಎಂದು ತಿಳಿಸಿದರು.
ಶ್ರೀ ಬಸವೇಶ್ವರ ವೈದ್ಯಕೀಯ ಕಾಲೇಜು ಹಾಗು ಆಸ್ಪತ್ರೆ ಲೋಕೇಶ್ ಮಾತನಾಡಿ ಗ್ರಾಮೀಣ ಪ್ರದೇಶದ ಬಡ ಜನರಿಗೆ ಉಚಿತ ಚಿಕಿತ್ಸೆ ನೀಡಲಾಗುತ್ತದೆ. ಶಿಬಿರದಲ್ಲಿ ಸ್ತ್ರೀ ರೋಗ. ಕಣ್ಣಿನ ಪೊರೆ. ಕಿವಿ ಮೂಗು ಗಂಟಲು ತೊಂದರೆ ಮಕ್ಕಳ ಕಾಯಿಲೆ ಜ್ವರ ಕೆಮ್ಮು ನೆಗಡಿ ಸಕ್ಕರೆ ಕಾಯಿಲೆ ಬಿಪಿ ಅಸ್ತಮಾ ಕ್ಷಯ ಕೀಲು ಮೂಳೆ ಸೇರಿದಂತೆ ಎಲ್ಲಾ ತರಹದ ಕಾಯಿಲೆಗಳಿಗೆ ಚಿಕಿತ್ಸೆಯನ್ನು ನೀಡಲಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ನಲಗೇತನಹಟ್ಟಿ ಪ್ರಾಥಮಿಕ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚೈತ್ರ. ಸುಕನ್ಯ. ಶಾಂತಮ್ಮ ಶ್ರೀ ಬಸವೇಶ್ವರ ಆಸ್ಪತ್ರೆಯ ಸಿಬ್ಬಂದಿಗಳಾದ ಲೋಕೇಶ್, ಯತೀಶ್, ಡಾ. ಪ್ರಿಯಾಂಕ ಡಾ.ಸುನಿಲ್ ಕುಮಾರ್,ಡಾ. ಅಹಮದ್ ಅಬ್ದುಲ್ ಜಮೀದ್, ಡಾ. ಶಾಹಿದಾ, ಡಾ. ಅನುಷಾ ಹೆಗ್ಡೆ, ಡಾ.ಇರ್ಷಾದ್, ಡಾ. ಸುಜನಾ,
ಸ್ಟಾಪ್ ನರ್ಸ್ ಯಶೋದಮ್ಮ, ಮತ್ತು
ಆಶಾ ಕಾರ್ಯಕರ್ತೆರಾದ ದ್ರಾಕ್ಷಾಯಿಣಿ, ಶಿವರುದ್ರಮ್ಮ, ನಲಗೇತನಹಟ್ಟಿ ಅನ್ನಪೂರ್ಣಮ್ಮ, ಕೆ.ಬಿ.ಪಾಪಮ್ಮ, ಎಸ್ ಮಂಜಮ್ಮ, ರತ್ನಮ್ಮ, ಆಶಾ, ಬಿ ಮಂಗಳಮ್ಮ, ಸಮುದಾಯ ಆರೋಗ್ಯ ಕೇಂದ್ರದ ಸಿಬ್ಬಂದಿಗಳು ಗ್ರಾಮೀಣ ಪ್ರದೇಶದ ರೋಗಿಗಳು ಇದ್ದರು