ಅಂತರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜನ ಜಾಗೃತಿ ಜಾತ
ಚಳ್ಳಕೆರೆ
ಸನಾತನ ಧರ್ಮದ ಸಂಸ್ಕೃತಿ ಸಂಸ್ಕರಣೆ ಉಳಿವಿಗಾಗಿ ನಮ್ಮ ದೇಶದ ಪ್ರಧಾನಿ ನರೇಂದ್ರ ಮೋದಿಜಿ ಅವರು 2014ನೇ ಇಸ್ವಿಯಲ್ಲಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು 200 ದೇಶಗಳಲ್ಲಿ ಚಾಲನೆ ನೀಡಿದರು ಎಂದು ಯೋಗ ಶಿಕ್ಷಕ ಎನ್ ಎಸ್ ಮಹೇಶ್ ಅಭಿಪ್ರಾಯ ಪಟ್ಟರು
ಇವರು ನಗರದ ಶ್ರೀ ಪತಂಜಲಿ ಯೋಗ ಶಿಕ್ಷಣ ವತಿಯಿಂದ ಅಂತರಾಷ್ಟ್ರೀಯ ಯೋಗ ದಿನಾಚರಣೆ ಮುನ್ನಾದಿನ ಬೈಕ್ ಜಾತ ಹಾಗೂ ಯೋಗ ನಡಿಗೆ ಕಾರ್ಯಕ್ರಮವನ್ನು ಚಾಲನೆ ನೀಡಿ ಮಾತನಾಡಿದ ಇವರು
ಮನುಷ್ಯ ಇತ್ತೀಚಿನ ದಿನಮಾನಗಳಲ್ಲಿ ಅತಿ ವೇಗದ ದುಡಿಮೆಗೆ ಹೋಗಿ ಕೆಲಸದ ಒತ್ತಡದಿಂದ ಮಾನಸಿಕ ಅಸ್ವಸ್ಥರಾಗಿ ಹಲವಾರು ಕಾಯಿಲೆಗಳಿಗೆ ತುತ್ತಾಗಿರುವಂಥದ್ದು ಸಮಾಜದಲ್ಲಿ ಕಾಣಬಹುದು, ಈ ಕಾರಣದಿಂದ ಸಾರ್ವಜನಿಕರು ತಮ್ಮ ಒತ್ತಡದ ಮಧ್ಯೆಯು ಬೆಳಗಿನ ಜಾವ ಒಂದು ಗಂಟೆಕಾಲ ಯೋಗಕ್ಕೆ ಮೀಸಲಿಟ್ಟರೆ ದೇಹ ಮನಸ್ಸು ಸದೃಢಗೊಳ್ಳುತ್ತದೆ ಯೋಗದಿಂದ ರೋಗವನ್ನು ದೂಡಬಹುದು ಅಲ್ಲದೆ ಯೋಗವನ್ನು ಮೈಗೂಡಿಸಿಕೊಂಡರೆ ದೇಹ ಮನಸ್ಸು ಸದೃಢವಾಗುತ್ತದೆ ಅಲ್ಲದೆ ಆಸ್ಪತ್ರೆಯ ಖರ್ಚು ಕೂಡ ಉಳಿಯುತ್ತದೆ ಇದರಿಂದಾಗಿ ಸಾರ್ವಜನಿಕರು ನಿಮ್ಮ ಮಕ್ಕಳು ಹಾಗೂ ನೀವು ಕೂಡ ದಿನನಿತ್ಯದ ಯೋಗ ಅಭ್ಯಾಸ ಮಾಡಿ ಕಾಯಿಲೆಯಿಂದ ದೂರವಿರಿ ಎಂದು ತಿಳಿಸಿದರು
ಇನ್ನು ಇಂದು ಬೆಳಗ್ಗೆ ಗುರುವಾರದಂದು 5:30 ರಿಂದ 7.30 ರ ವರೆಗೆ ನಗರದ ಪ್ರಮುಖ ಬೀದಿಗಳಲ್ಲಿ ಯೋಗ ಕುರಿತು ಜನ ಜಾಗೃತಿ ಮೂಡಿಸಿದರು
ಇನ್ನು ಈ ಕಾರ್ಯಕ್ರಮದಲ್ಲಿ ಯೋಗ ಶಿಕ್ಷಕ ಮನೋಹರ್, ಹಿರಿಯ ಶಿಕ್ಷಕ ಶಿವ ನಾಗಪ್ಪ ಜಯರಾಮ್ ಬಾಬಣ್ಣ, C T ಮಾಸ್ಟರ್ ತಿಪ್ಪೇಸ್ವಾಮಿ ಪಂಕಜಕ್ಕ ಮಣಿ ಅಕ್ಕ ಪ್ರಮೋದಕ್ಕ ಸೇರಿದಂತೆ ಹಲವಾರು ಯೋಗಪಟುಗಳು ಭಾಗಿಯಾಗಿದ್ದರು