ಚಳ್ಳಕೆರೆ ನ್ಯೂಸ್ :
ಫಲಕ್ಕೆ ಬಂದಾಗ ಗಿಡದಲ್ಲಿ ಕಾಯಿ ಕಟ್ಟದೆ ರೈತರು ಸಂಕಷ್ಟ ಎದುರುವಂತಿಸದಾಗಿದೆ ಆದ್ದರಿಂದ ಪ್ರತಿಯೊಬ್ಬ ನರ್ಸರಿದಾರರು ರೈತರಿಗೆ ಸಸಿ ಕೊಟ್ಟ ಬಿಲ್ ಗಳನ್ನು ಕಡ್ಡಾಯವಾಗಿ ನೀಡಬೇಕು ಎಂದು ತಹಶಿಲ್ದಾರ್ ರೇಹಾನ್ ಪಾಷ ಹೇಳಿದರು.
ಅವರು ನಗರದ ತಾಲೂಕು ಕಛೇರಿಯಲ್ಲಿ ತೋಟಗಾರಿಕೆ ಇಲಾಖೆಯಿಂದ ಆಯೋಜಿಸಿದ್ದ ನರ್ಸರಿ ಮಾಲೀಕರ ಸಭೆಯಲ್ಲಿ ಮಾತನಾಡಿದರು
ಕಳೆದ ಬಾರಿ ಅನ್ನದಾತ ಹೆಸರಿನ ನರ್ಸರಿಯಲ್ಲಿ ರೈತರಿಗೆ ಉತ್ತಮ ತಳಿಯ ಸಸಿಗಳನ್ನು ನೀಡದೆ ಸಮಸ್ಯೆ ಅನುಭವಿಸುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದರು ಆದ್ದರಿಂದ ಈ ಬಾರೀ ಕಡ್ಡಾಯವಾಗಿ ತಾಲೂಕಿನಲ್ಲಿ ಇರುವ ನರ್ಸರಿ ಮಾಲೀಕರು ಪರವಾನಿಗೆ, ಹಾಗೂ ರೈತರಿಗೆ ಬಿಲ್, ಲಾಟ್ ನಂಬರ್ , ಈಗೇ ರೈತರಿಗೆ ತೊಂದರೆ ಯಾಗದಂತೆ ನರ್ಸರಿ ಮಾಲೀಕರು ಸಹಕಾರ ನೀಡಬೇಕು ಎಂದರು.
ತೋಟಗಾರಿಕೆ ಸಹಾಯಕ ಅಧಿಕಾರಿ ಆರ್.ವಿರೂಪಾಕ್ಷಪ್ಪ ಮಾತನಾಡಿ, ಚಳ್ಳಕೆರೆ ತಾಲೂಕಿನಲ್ಲಿ ಪ್ರತಿಯೊಂದು
ವರ್ಷಕ್ಕೆ 60 ರಿಂದ 80 ಸಾವಿರ ಸಸಿ ಮಾರಾಟ ವಾಗುತ್ತಿದೆ, ಅದರಂತೆ ಸು.ಒಂದು ಕೋಟಿಯಷ್ಟು ವ್ಯಾವಹಾರಿಕ ವಾಹಿವಾಟು ಹಾಗುತ್ತಿದೆ ಇನ್ನೂ ಈ ಬಾಗದ ರೈತರಿಗೆ ನರ್ಸರಿಯಿಂದ ಅನುಕೂಲ ವಾಗುತ್ತಿದೆ, ಇನ್ನೂ ಒಂದು ಎಕರೆಗೆ ಎರಡುವರೆ ಲಕ್ಷ ಖರ್ಚು ಬರುತ್ತಿದೆ,
ರೈತರಿಗೆ ಉತ್ತಮ
ಸಸಿಯ ತಳಿಯ ಗುಣಮಟ್ಟದ ಸಸಿ ನೀಡಬೇಕು, ಪರವಾನಿಗೆ ಪಡೆದುಕೊಳ್ಳಬೇಕು, ಬಿಲ್ ನೀಡಬೇಕು, ಎಂದು ಸೂಚಿಸಿದರು.
ಇನ್ನೂ ಇದೇ ಸಂದರ್ಭದಲ್ಲಿ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ, ಕಳೆದ ಬಾರಿ ನಡೆದ ಸಭೆಯಲ್ಲಿ ನರ್ಸರಿ ಮಾಲೀಕರು ಯಾವುದೇ ಕಾರಣಕ್ಕೂ ರೈತರಿಗೆ ಬಿಲ್ ನೀಡಬೇಕು, ಉತ್ತಮ ಗುಣಮಟ್ಟದ ತಳಿಯ ಸಸಿಯನ್ನು ರೈತರಿಗೆ ನೀಡಬೇಕು ಎಂದರು.
ಇನ್ನೂ ರೈತ ಮುಖಂಡ ಸುರೇಶ್, ಸಭೆಯಲ್ಲಿ ಹಲವು ಕ್ರಮಗಳನ್ನು ಕೈಗೊಳ್ಳುವಂತೆ ತಹಶಿಲ್ದಾರ್ ಗಮನಕ್ಕೆ ತಂದರು.
ಪ್ರತಿಯೊಂದು ನರ್ಸರಿ ಗೆ ಕಡ್ಡಾಯವಾಗಿ ಪರವಾನಿಗೆ ಪಡೆಯಬೇಕು , ತಹಶಿಲ್ದಾರ್, ಹಾಗೂ ತೋಟಗಾರಿಕೆ ಇಲಾಖೆ ಯಿಂದ ಬೀಜದ ತಳಿಯನ್ನು ಉತ್ತಮ ಗುಣಮಟ್ಟದ ಸಸಿ ನೀಡಬೇಕು ಎಂದು ತಾಕೀತು ಮಾಡಿದರು
ಇದೇ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ತೋಟಗಾರಿಕೆ ಸಹಾಯಕ ಅಧಿಕಾರಿ ವಿರೂಪಾಕ್ಷಪ್ಪ, ವಿಜಯ್ ಕುಮಾರ್, ತಿಪ್ಪೇಸ್ವಾಮಿ ಇತರರು ಹಾಗೂ ರೈತರು, ನರ್ಸರಿ ಮಾಲೀಕರು ಹಾಜರಿದ್ದರು.