ಚಳ್ಳಕೆರೆ ನ್ಯೂಸ್ :
ಅಪ್ಪಂದಿರ ದಿನಾಚರಣೆ ಪ್ರಯುಕ್ತ ಹೋಳಿಗೆ ಊಟ
ವಿತರಣೆ
ಹೆಗ್ಗೆರೆ ತಾಯಮ್ಮ ಬಾಲಕಿಯರ ಪ್ರೌಢ ಶಾಲೆ ಶಿಕ್ಷಕಿ ಎಸ್.
ಸುಜಾತ ಇವರ ತಂದೆ ನೆನಪಿಗಾಗಿ ನಗರದ ಬನಶ್ರೀ ವೃದ್ಧಾಶ್ರಮದ
ವಾಸಿಗಳಿಗೆ ಹೋಳಿಗೆ ಊಟ ವಿತರಿಸುವುದರ ಮೂಲಕ ಅಪ್ಪಂದಿರ
ದಿನಾಚರಣೆ ಕಾರ್ಯಕ್ರಮ ಸರಳವಾಗಿ ಆಚರಣೆ ಮಾಡಿದರು.
ನಗರದ ಹಿರಿಯೂರು ರಸ್ತೆ ಸಮೀಪ ಇರುವ ಬನಶೀ ಆಶ್ರಮಕ್ಕೆ
ತಮ್ಮ ಪತಿ ಶಿಕ್ಷಕ ಚೆನ್ನಪ್ಪ ಇವರ ಜತೆ ತೆರಳಿ ವೃದ್ಧರನ್ನು
ಮಾತನಾಡಿಸಿ ಅವರಿಗೆ ಹೋಳಿಗೆ ಸಿಹಿಯನ್ನು ವಿತರಿಸಿ ಅಪ್ಪಂದಿರ
ದಿನಾಚರಣೆ ಮಾಡಿದರು.
ಈ ವೇಳೆ ನಿವೃತ್ತಿ ಶಿಕ್ಷಕಿ ಮಂಜುಳಮ್ಮ
ಇದ್ದರು.