ಚಳ್ಳಕೆರೆ ನ್ಯೂಸ್ :
ಸರ್ಕಾರಿ ನೌಕರಿ ನೀಡಲು ವೀರಶೈವ ಸಮಾಜದಿಂದ
ಗೃಹ ಸಚಿವರಿಗೆ ಮನವಿ
ರೇಣುಕಾಸ್ವಾಮಿ ಹತ್ಯೆ ಹಿನ್ನೆಲೆಯಲ್ಲಿ ಚಿತ್ರದುರ್ಗದ ವಿಆರ್ ಎಸ್
ಬಡಾವಣೆಯ ಅವರ ಮನೆಗೆ ಗೃಹ ಸಚಿವ ಜಿ. ಪರಮೇಶ್ವರ್ ಭೇಟಿ
ನೀಡಿ ಕುಟುಂಬಕ್ಕೆ ಸಾಂತ್ವಾನ ಹೇಳಿದರು.
ಇದೇ ಸಮಯದಲ್ಲಿ
ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಎಸ್ ಎಂಎಲ್ ತಿಪ್ಪೇಸ್ವಾಮಿ,
ರೇಣುಕಾಸ್ವಾಮಿ ಪತ್ನಿಗೆ ಸರ್ಕಾರಿ ನೌಕರಿ ಕೊಡುವಂತೆ ಮನವಿ
ಸಲ್ಲಿಸಿದರು.
ಬಡ ಕುಟುಂಬವಾಗಿದೆ. ಕೂಲಿ ಮಾಡಿ ಬದುಕುವ
ಸ್ಥಿತಿ ಇದೆ. ಆದ್ದರಿಂದ ಪಿಯುಸಿ ಓದಿಕೊಂಡಿರುವ ರೇಣುಕಾಸ್ವಾಮಿ
ಪತ್ನಿಗೆ ಕೆಲಸ ಕೊಡುವಂತೆ ಮನವಿ ಸಲ್ಲಿಸಿದರು.