ಚಳ್ಳಕೆರೆ ನ್ಯೂಸ್ :
ಲಾರಿ ಮತ್ತು ಬೈಕ್ ಅಪಘಾತ : ಸವಾರನಿಗೆ ಗಂಭೀರ
ಗಾಯ
ಚಳ್ಳಕೆರೆ ನಗರದ ಹೊರವಲಯದ ಬಳ್ಳಾರಿ ಹಾಗೂ ಚಳ್ಳಕೆರೆ
ಮಧ್ಯ ರಾಷ್ಟ್ರೀಯ ಹೆದ್ದಾರಿ 150 ರಲ್ಲಿ ಲಾರಿ ಹಾಗೂ ಬೈಕ್
ನಡುವೆ ಅಪಘಾತವಾಗಿದ್ದು,
ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿ
ಹಿಂಬದಿಯ ಸವಾರರಿಗೂ ಗಾಯಗಳಾಗಿವೆ.
ತಕ್ಷಣವೇ ಸ್ಥಳೀಯರು
ಗಾಯಳುಗಳನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಂಬ್ಯುಲೆನ್ಸ್ ಗೆ
ಕರೆ ಮಾಡಿದಾಗ ಸರಿಯಾದ ಸಮಯಕ್ಕೆ ಬಾರದೆ ಆಟೋದಲ್ಲಿ
ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಘಟನಾ ಸ್ಥಳಕ್ಕೆ
ಚಳ್ಳಕೆರೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.