ಚಳ್ಳಕೆರೆ ನ್ಯೂಸ್ :
ರೇಣುಕಾ ಸ್ವಾಮಿ ಕೊಲೆ ಅಮಾನವೀಯ ಕೃತ್ಯ
ರೇಣುಕಾಸ್ವಾಮಿ ಹತ್ಯೆ ಪ್ರಕರಣ ರಾಜ್ಯ ಅಷ್ಟೆ ಅಲ್ಲ, ದೇಶದಲ್ಲಿ
ಬಹಳ ಜೋರಾಗಿ ಚರ್ಚೆಯಾಗುತ್ತಿದೆ, ರಾಜ್ಯ ಸರ್ಕಾರ
ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡು ತನಿಖೆ
ನಡೆಸಬೇಕು.
ಯಾರ ಒತ್ತಾಯಕ್ಕೆ ಮಣಿಯದೆ ಸೂಕ್ತ ಕಾನೂನು
ರೀತಿಯಲ್ಲಿ ತನಿಖೆ ನಡೆಸಬೇಕು ಎಂದು ಸರ್ಕಾರವನ್ನು ಬಿಜೆಪಿ
ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ ಒತ್ತಾಯಿಸಿದರು.
ಅವರು
ಚಿತ್ರದುರ್ಗದಲ್ಲಿ ರೇಣುಕಾ ಸ್ವಾಮಿ ಮನೆಗೆ ಭೇಟಿ ನೀಡಿ ನಂತರ
ಮಾಧ್ಯಮಗಳೊಂದಿಗೆ ಮಾತಾಡಿದರು. ರೇಣುಕಾಸ್ವಾಮಿ ಕೊಲೆ
ಅಮಾನವೀಯ ಕೃತ್ಯವಾಗಿದೆ ಎಂದರು.