ನೂತನವಾಗಿ ಸಂಸದರಾದವರು ಕೇಂದ್ರದಿAದ ಒಂದು ನಯಾಪೈಸೆ ತರುವುದಿಲ್ಲ : ಲೋಕಸಭಾ ಪರಾಜಿತ ಅಭ್ಯರ್ಥಿ ಬಿಎನ್.ಚಂದ್ರಪ್ಪ ಪರೋಕ್ಷವಾಗಿ ದಾಳಿ

ಚಳ್ಳಕೆರೆ : ನೂತನವಾಗಿ ಸಂಸದರಾದವರು ಚಿತ್ರದುರ್ಗವನ್ನು ಹೈಟೆಕ್ ಮಾಡುತ್ತಿನಿ ಎಂದು ಹೇಳುತ್ತಾರೆ, ಅಲ್ಲ ರಾಜ್ಯ ಸರಕಾರವನ್ನು ಬಿಟ್ಟು ಕೇಂದ್ರದಿAದ ಒಂದು ನಾಯಫೈಸೆ ಅನುದಾನ ತರವುದಕ್ಕೆ ಹಾಗುವುದಿಲ್ಲ ಎಂದು ಲೋಕಸಭಾ ಪರಾಜಿತ ಅಭ್ಯರ್ಥಿ ಬಿಎನ್.ಚಂದ್ರಪ್ಪ ಪರೋಕ್ಷವಾಗಿ ದಾಳಿ ನಡೆಸಿದರು.
ನಗರದ ತಾಲೂಕಿನ ಛೇಂಬರ್ ಆಫ್ ಕಾಮರ್ಸ್ ಸಭಾಂಗಣದಲ್ಲಿ ಸ್ಥಳೀಯ ಶಾಸಕ ಟಿ.ರಘುಮೂರ್ತಿ ಅಧ್ಯಕ್ಷತೆಯಲ್ಲಿ ನಡೆದ ಲೋಕಸಭಾ ಚುನಾವಣೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಕೃತಜ್ಞತಾ ಸಭೆಯಲ್ಲಿ ಮಾತನಾಡಿದರು,
ನಾನು ಸೋತರು ಜಿಲ್ಲೆಯ ಅಭಿವೃದ್ದಿಗೆ ಐದು ಜನ ಶಾಸಕರ ವಿಶ್ವಾಸದಿಂದ ಅಭಿವೃದ್ದಿ ಮಾಡುತ್ತೆನೆ, ಆದರೆ ನೂತನ ಸಂಸದ ಗೋವಿಂದ ಕಾರಜೋಳಗೆ ರಾಜ್ಯ ಸರಕಾರವನ್ನು ಬಿಟ್ಟು ಏನನ್ನು ಮಾಡಲು ಹಾಗುವುದಿಲ್ಲ ಎಂದ ಪರೋಕ್ಷವಾಗಿ ಹೇಳಿದರು.
ಚಳ್ಳಕೆರೆಯಲ್ಲಿ ಅತೀ ಹೆಚ್ಚಿನ ಮತಗಳನ್ನು ಸು.12 ಸಾವಿರ ಮತಗಳ ಅಂತರ ನೀಡಿದ್ದಾರೆ ಇದಕ್ಕೆ ಹಗಲು ರಾತ್ರಿ ಶ್ರಮಿಸಿ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಹಾಗೂ ಕಾರ್ಯಕರ್ತರು ಮುಖಂಡರ ಶ್ರಮಕ್ಕೆ ನಾನು ಅಭಾರಿಯಾಗಿದ್ದೆನೆ, ಕಳೆದ ಬಾರಿ ನಾನು ಕಂಡತೆ ಕೇಂದ್ರದ ಮಂತ್ರಿಯಾದರು ಜಿಲ್ಲೆಗೆ ಯಾವ ಅನುದಾನ ತರಲಿಲ್ಲ, ಸುಮ್ಮನೇ ಜನರನ್ನು ಮರಳು ಮಾಡಬಾರದು, ಈಬಾರಿಯೂ ಹಾಗೇ ನೋಡಿ ಎಂದರು.
ಇನ್ನೂ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ ಮಾತನಾಡಿ, ಕಾಂಗ್ರೇಸ್ ಪಕ್ಷದ ಸೋಲು ಕಂಡಿಲ್ಲ ಕಾಣುವುದಿಲ್ಲ ಕೊಂಚ ಏರುಪೇರಾಗಿರುವುದರಿಂದ ಚಂದ್ರಪ್ಪನರವರು ಸೋಲು ಕಾಣಬೇಕಾಯಿತು, ಆದರೆ ಅವರು ಕೇವಲ ಚುನಾವಣೆಯಲ್ಲಿ ಮಾತ್ರ ಸೋತಿರಬಹುದು ಜನರ ಹಾಗೂ ಮತದಾರರ ಮನಸ್ಸಿನಲ್ಲಿ ಸದಾ ಹಸಿರಾಗಿರುತ್ತಾರೆ, ಅದರಂತೆ ಅವರ ಕಾರ್ಯವೈಖರಿ ಈಡೀ ಪಕ್ಷದ ವರ್ಚಸ್ಸಿಗೆ ಹುಮ್ಮುಸ್ಸು ತರಿಸುತ್ತದೆ. ಆದ್ದರಿಂದ ಮುಂಬರುವು ಜಿಲ್ಲಾ ಪಂಚಾಯಿತ್, ತಾಲೂಕು ಪಂಚಾಯಿತ್ ಚುನಾವಣೆಗಳಲ್ಲಿ ಕಾಂಗ್ರೇಸ್ ಪಕ್ಷದ ಪರವಾಗಿ ನಿಲ್ಲಬೇಕು, ಕಾರ್ಯಕರ್ತರು ಹಾಗೂ ಮುಖಂಡರು ಎದೆಗುಂದ ಬಾರದು ಎಂದರು.
ಇದೇ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ತಾಜ್‌ಪೀರ್ ಮಾತನಾಡಿ, ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಿಎನ್.ಚಂದ್ರಪ್ಪರ ಸೋಲು ಖಂಡಿತವಾಗಿಯು ಅವರದಲ್ಲ ಆದರೆ ಬಿಜೆಪಿ ಜೆಡಿಎಸ್ ಪಕ್ಷದ ಮುಖಂಡರು ಕಾರ್ಯಕರ್ತರು ಇಲ್ಲದೆ ಇರುವ ಪಕ್ಷ ಆಕಸ್ಮತ್ ಹಾಗಿ ಅಧಿಕಾರಕ್ಕೆ ಬಂದಿದೆ ಹೊರತು ಜನರ ಆದೇಶದ ಮೇರೆಗೆ ಅಲ್ಲ, ಆದ್ದರಿಂದ ಮುಂಬರುವ ತಾಪಂ. ಜಿಲ್ಲಾ ಪಂಚಾಯಿತ್ ಚುನಾವಣೆಯಲ್ಲಿ ಪಕ್ಷದ ಪರವಾಗಿ ಕಾರ್ಯಕರ್ತರು ಕೆಲಸ ಮಾಡಬೇಕು ಈಗಿನಿಂದಲೆ ತಯಾರೋಗೋಣ ಎಂದರು.

ಇದೇ ಸಂಧರ್ಭದಲ್ಲಿ ಜಿಲ್ಲಾ ಕಾಂಗ್ರೇಸ್ ಅಧ್ಯಕ್ಷ ತಾಜ್ ಪೀರ್, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಕೆ.ವೀರಭದ್ರಪ್ಪ, ಶಶಿಧರ್, ಜಿಪಂ.ಮಾಜಿ ಸದಸ್ಯ ಬಾಬುರೆಡ್ಡಿ, ಪ್ರಕಾಶ್ ಮೂರ್ತಿ, ರವಿಕುಮಾರ್, ಬಾಲರಾಜ್, ಗದ್ದಿಗೆ ತಿಪ್ಪೆಸ್ವಾಮಿ, ಬಾಬಣ್ಣ, ಪ್ರಭುದೇವ್, ಕಂದಿಕೆರೆ ಸುರೇಶ್ ಬಾಬು, ಗಿರಿಯಪ್ಪ, ದ್ಯಾವರನಹಳ್ಳಿ ಆನಂದ್, ಚನ್ನಗಾನಹಳ್ಳಿ ರುದ್ರಮುನಿ, ನೇತಾಜಿ ಪ್ರಸನ್ನ ಕುಮಾರ್, ಆರ್.ಪ್ರಸನ್ನ ಕುಮಾರ್, ಚೇತನ್ ಕುಮಾರ್, ಬಿ,ಪರೀದ್ ಖಾನ್, ತಿಪ್ಪಣ್ಣ ಮರಿಕುಂಟೆ, ಸರಸ್ಪತಿ, ಉಷಾ, ಗೀತಾಬಾಯಿ, ಇತರ ಹಲವು ಮುಖಂಡರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Namma Challakere Local News
error: Content is protected !!