ಚಳ್ಳಕೆರೆ ನ್ಯೂಸ್ :
ರೇಣುಕಾ ಸ್ವಾಮಿ ಕುಟುಂಬಕ್ಕೆ ಎರಡು ಲಕ್ಷ
ಧನ ಸಹಾಯ ಮಾಡಿದ ಶಾಸಕರು
ಬೆಂಗಳೂರಿನಲ್ಲಿ ದರ್ಶನ್ ಅಂಡ್ ಗ್ಯಾಂಗ್ ನಿಂದ ಹತ್ಯೆಗೊಳಗಾದ,
ಚಿತ್ರದುರ್ಗದ ರೇಣುಕಾ ಸ್ವಾಮಿ ಮನೆಗೆ ಚಿತ್ರದುರ್ಗದ ಶಾಸಕ ಕೆ ಸಿ
ವೀರೇಂದ್ರ ಅವರು ಭೇಟಿ ನೀಡಿ ಸಾಂತ್ವಾನ ಹೇಳಿದರು.
ಪೋಷಕರ
ಬಳಿ ಮಾಹಿತಿ ಪಡೆದುಕೊಂಡು ಪತ್ನಿ ಹಾಗೂ ಪೋಷಕರಿಬ್ಬರಿಗೂ
ಧೈರ್ಯ ಹೇಳಿದರು.
ನಂತರ ಕುಟುಂಬಕ್ಕೆ ಎರಡು ಲಕ್ಷ
ರೂಪಾಯಿಗಳ ಸಹಾಯ ಧನ ನೀಡಿದರು.
ಈ ಸಮಯದಲ್ಲಿ
ಕೆಪಿಸಿಸಿ ಸದಸ್ಯ ನಾಗರಾಜ್, ಹಾಗೂ ಕಾಂಗ್ರೆಸ್ ಕಾರ್ಯಕರ್ತರು
ಮತ್ತು ಬೆಂಬಲಿಗರು ಇದ್ದರು.