ಚಳ್ಳಕೆರೆ : ಕಳೆದ ಎರಡು ವರ್ಷಗಳ ಕಾಲ ಕೊರೊನ ಸಂಕಷ್ಟದಿಂದ ಹಬ್ಬ ಹರಿದಿನಗಳು ಸರಳವಾಗಿ ಜರುಗಿದ್ದು
ಈಗ ಕೊಂಚ ಕೊವಿಡ್ ಪ್ರಕರಣಗಳ ಸಂಖ್ಯೆ ಇಳಿಮುಖವಾಗುತಿದಂತೆ ರಾಜ್ಯದೆಲ್ಲೆಡೆ ಜಾತ್ರೆಗಳು, ಹಬ್ಬ ಹರಿದಿನಗಳು ಅದ್ದೂರಿಯಾಗಿ ಗರಿಗೆದುರುತ್ತಿವೆ.
ಅಂತಯೇ ಮಧ್ಯ ಕರ್ನಾಟಕ ಭಾಗದ ಚಳ್ಳಕೆರೆ ನಗರದ ಆರಾಧ್ಯದೈವಾದ ಶ್ರೀ ವೀರಭದ್ರಸ್ವಾಮಿ ರಥೋತ್ಸವ ಕೂಡ ಈ ಬಾರಿ ಅದ್ದೂರಿಯಾಗಿ ಜರುಗಲಿದೆ.
ಇನ್ನೂ ಶ್ರೀ ವೀರಭದ್ರಸ್ವಾಮಿ ರಥೋತ್ಸವ
ಹಾಗೂ ದನಗಳ ಜಾತ್ರಾ ಮಹೋತ್ಸವ ನಡೆಯಲಿದೆ.
ಇನ್ನೂ ಮೇ. 11 ರಿಂದ ಪ್ರಾರಂಭವಾದ ದೇವರ ಪೂಜಾ ಕೈ ಕಾರ್ಯಗಳು 17-05-2022 ನೇ ಮಂಗಳವಾರದವರೆಗೆ ಪ್ರತಿ ವರ್ಷದ ಪದ್ಧತಿ ಪ್ರಕಾರ
ನಡೆಯುವ ಶ್ರೀ ವೀರಭದ್ರಸ್ವಾಮಿ ಜಾತ್ರೆಯ ಕಾರ್ಯಕ್ರಮಗಳು ನಡೆಯಲಿವೆ.
ಜಾತ್ರೆಯ ಕಾರ್ಯಕ್ರಮಗಳು:-
ದಿನಾಂಕ: 11-5-2022 ನೇ ಬುಧವಾರ : ಶ್ರೀ ವೀರಭದ್ರಸ್ವಾಮಿಗೆ ಏಕಾದಶಿ ರುದ್ರಾಭಿಷೇಕ, ಕಂಕಣಧಾರಣೆ, ಹೊಯಸ್ಥಾಪನೆ
ದಿನಾಂಕ: 12-5-2022 ನೇ ಗುರುವಾರ : ದೊಡ್ಡ ರಥಕ್ಕೆ ಕಳಸ ಸ್ಥಾಪನೆ, ರಾತ್ರಿ ಶ್ರೀ ಸ್ವಾಮಿಯ ಉತ್ಸವ, ಪರಂತರ ವೀರನಾಟ್ಯ,
ದಿನಾಂಕ: 13-5-2022 ನೇ ಶುಕ್ರವಾರ : ದೊಡ್ಡ ರಥಕ್ಕೆ ತೈಲಾಭಿಷೇಕ, ರಾತ್ರಿ ಶ್ರೀ ಸ್ವಾಮಿಯ ಉತ್ಸವ, ಪರಂಶದ ವೀರಗಾಸ್ಯ,
ದಿನಾಂಕ: 14-5-2022 ನೇ ಶನಿವಾರ : ಶ್ರೀ ಸ್ವಾಮಿಗೆ ವೀರಗಾರಿ, ಬೆಳ್ಳಿ ಪಲ್ಲಕ್ಕಿಯಲ್ಲಿ ಗಂಗಾದೇವತೆಯ ಉತ್ಸವ
ದೊಡ್ಡರಿ ಸುಷ್ಠಾನ ಚುರರ ದೊಡ್ಡ ಮನೆತನದವರಿಂದ ಶ್ರೀ ಸ್ವಾಮಿಗೆ
ಅಗ್ನಿಕುಂಡ ನಂತರ ಪ್ರರರಬದನಾ ಮತ್ತು ಅಂದಾಜನ ಕವೃಷ
ದಿನಾಂಕ: 15-5-2022 ನೇ ಭಾನುವಾರ ಮಧ್ಯಾಹ್ನ 3-30 ಗಂಟೆಗೆ ಮುಕ್ತಿ ಬಾವುಟ ಹರಾಜು ಹಾಗೂ ಸರಂತರ ವೀರನಾಟ್ಟ
ದೊಡ್ಡ ರಥೋತ್ಸವ,
ದಿನಾಂಕ: 16-5-2022 ನೇ ಸೋಮವಾರ : ಶ್ರೀ ಸ್ವಾಮಿಯ ಉತ್ಸವದೊಂದಿಗೆ ಗ್ರಾಮದೇವತೆಯಾದ ಚಳ್ಳಕೆರಮ್ಮ ಮತ್ತು
ಶ್ರೀ ಉಡುಸಲಮ್ಮನವರ ಉತ್ಸವ, ಸ್ಮರಂತರ ವೀರನಾಟಿ (ಕಡುಬಿನ ಕಾಳಗ)
ಈ ಬಾರಿ ವಿಶೇಷವಾಗಿ ಮುಕ್ತಿಭಾವಟ ಹರಾಜು ಪಡೆದ ಭಕ್ತಾಧಿಗಳು ಒಂದು ತಿಂಗಳ ಒಳಗೆ ಹಣ ಪಾವತಿಸಬೇಕಾಗಿ ಆಡಳಿತ ಮಂಡಳಿ ತಿಳಿಸಿದ್ದಾರೆ.