ಚಳ್ಳಕೆರೆ ನ್ಯೂಸ್ :
ಶ್ರೀರಾಮದೇವರ ಒಡ್ಡಿನಲ್ಲಿ ಮೊಸಳೆ ಪ್ರತ್ಯಕ್ಷ
ಚಿತ್ರದುರ್ಗದ ಜೋಗಿಮಟ್ಟಿ ಅರಣ್ಯ ಪ್ರದೇಶಕ್ಕೆ
ಹೊಂದಿಕೊಂಡಂತಿರುವ ಶ್ರೀರಾಮದೇವರ ಒಡ್ಡಿನಲ್ಲಿ
ಮೊಸಳೆಯೊಂದು ಪ್ರತ್ಯಕ್ಷವಾಗಿದೆ.
ಕೆಲ ವರ್ಷಗಳಿಂದ
ನೀರಿನಲ್ಲಿರುವ ಈ ಮೊಸಳೆ ಆಗಾಗ್ಗೆ ಕಾಣಿಕೊಳ್ಳುತ್ತಿದ್ದು, ಇಲ್ಲಿ
ಈಜು ಪ್ರಿಯರು, ಹಾಗೂ ಕುರಿಗಾಹಿಗಳು ನೀರು ಕುಡಿಯಲು
ಬರುತ್ತಿರುತ್ತಾರೆ.
ಮೊಸಳೆ ಪ್ರತ್ಯಕ್ಷವಾಗಿರುವುದರಿಂದ ಜನ
ಭಯಭೀತರಾಗಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಇದನ್ನು
ಹಿಡಿದು ಅನಾಹುತವಾಗುವ ಮೊದಲು ಕ್ರಮ ತೆಗೆದುಕೊಳ್ಳುವಂತೆ
ಒತ್ತಾಯಿಸಿದ್ದಾರೆ.