ಚಳ್ಳಕೆರೆ ನ್ಯೂಸ್ :
ಅನಾಥವಾಗಿ ನಿಂತಿದ್ದ ರೇಣುಕಾಸ್ವಾಮಿ ಬಳಸುತ್ತಿದ್ದ
ವಾಹನ
ಚಿತ್ರ ನಟ ದರ್ಶನ, ಹಾಗೂ ಸಹಚರರಿಂದ ಹತ್ಯೆಗೀಡಾದ ಚಿತ್ರದುರ್ಗ
ನಗರದ ವಿಆರ್ ಎಸ್ ಬಡಾವಣೆಯ, ರೇಣುಕಾ ಸ್ವಾಮಿ ಚಿತ್ರದುರ್ಗ
ನಗರದ ಐಯುಡಿಸಿ ಬಡಾವಣೆಯ ಅಪಲೋ ಫಾರ್ಮಸಿಯಲ್ಲಿ
ಮ್ಯಾನೇಜರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಆತನ್ನು ಇಲ್ಲಿಂದ
ಕರೆದುಕೊಂಡ ಹೋದ ದಿನದಿಂದ ರೇಣುಕಾ ಸ್ವಾಮಿ ಓಡಾಡಲು
ಬಳಸುತ್ತಿದ್ದ ka 16y 7756 ದ್ವಿಚಕ್ರ ವಾಹನವು, ಫಾರ್ಮಸಿಯ
ಪಕ್ಕದಲ್ಲಿರುವ ಬಾಲಾಜಿ ಬಾರ್ ಬಳಿಯೇ ಎರಡು ದಿನಗಳಿಂದ
ಅನಾಥವಾಗಿ ನಿಂತಿತ್ತು.
ನಂತರ ಅವರ ಮನೆಯವರು
ದ್ವಿಚಕ್ರವಾಹನವನ್ನು ಮನೆಗೆ ತಂದಿದ್ದಾರೆ.
ಇನ್ನೂ
ಬೆಂಗಳೂರಿನಲ್ಲಿ ಚಿತ್ರದುರ್ಗ ಮೂಲದ ರೇಣುಕಾ
ಸ್ವಾಮಿ ಕೊಲೆ
ಪವಿತ್ರ ಗೌಡಗೆ ಅಶ್ಲೀಲ ಪೋಟೋ ಹಾಗೂ ಮೆಸೇಜ್ ಮಾಡಿದ್ದ
ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ
ನಟ ದರ್ಶನ್ ರನ್ನು ಅರೆಸ್ಟ್ ಮಾಡಲಾಗಿದೆ.
ಚಿತ್ರದುರ್ಗ ನಗರದ
ತುರುವನೂರು ರಸ್ತೆ 1ನೇ ಕ್ರಾಸ್ ನಿವಾಸಿ ರೇಣುಕಾಸ್ವಾಮಿ
ಅಪೋಲೋ ಮೆಡಿಕಲ್ ಶಾಪ್ ನಲ್ಲಿ ಕೆಲಸ ಮಾಡಿಕೊಂಡಿದ್ದ.
ಕಳೆದ 3 ದಿನಗಳ ಹಿಂದೆ ದರ್ಶನ್ ಬೆಂಗಳೂರಿಗೆ ಕರೆಸಿಕೊಂಡು
ಕೊಲೆ ಮಾಡಲಾಗಿದೆ ಎಂದು ಆರೋಪಿಸಿದೆ. ತುರುವನೂರು
ರಸ್ತೆಯ ಮೃತನ ಮನೆಗೆ ಚಿತ್ರದುರ್ಗ ಪೊಲೀಸ್ ರು ಭೇಟಿ ನೀಡಿ
ಪರಿಶೀಲಿಸಿದ್ದಾರೆ.
ರೇಣುಕಾ ಸ್ವಾಮಿ ಮನೆಯಲ್ಲಿ ಮೂಡಿದ ನೀರವ ಮೌನ
ನಟಿ ಪವಿತ್ರಾ ಗೌಡಗೆ ಆಶ್ಲೀಲ ಮೆಸೇಜ್ ಪ್ರಕರಣಕ್ಕೆ
ಸಂಬಂಧಿಸಿದಂತೆ, ನಟ ದರ್ಶನ್ ಸಹಚರರು ಚಿತ್ರದುರ್ಗದ,
ರೇಣುಕಾ ಸ್ವಾಮಿ ಕೊಲೆ ಮಾಡಿದ್ದು, ಇದೀಗ ಚಿತ್ರದುರ್ಗದ
ತುರುವನೂರು ರಸ್ತೆಯ ವಿಆರ್ ಎಸ್ ಲೇಔಟ್ ನ ಮನೆಯಲ್ಲಿ
ನೀರವ ಮೌನ ಆವರಿಸಿದೆ.
ಮನೆಯಲ್ಲಿ ಸಂಬಂಧಿಕರು, ವೀರಶೈವ
ಸಮಾಜದ ಬಂಧುಗಳು, ಆಗಮಿಸುತ್ತಿದ್ದಾರೆ. ರೇಣುಕಾ ಸ್ವಾಮಿಯ
ಮೃತ ದೇಹಕ್ಕಾಗಿಕಾಯುತ್ತಿದ್ದಾರೆ. ಇತ್ತ ಮೂರು ತಿಂಗಳ ರೇಣುಕಾ
ಸ್ವಾಮಿ ಪತ್ನಿಯ ಗೋಳು ಮುಗಿಲು ಮುಟ್ಟಿದೆ.