ಮೊಳಕಾಲ್ಮೂರು :: ಜೂನ್ .10.
ಮಾಧ್ಯಮಕ್ಕೆ ಒಳಪಡದವರು ತಮ್ಮ ವಾಹನಗಳ ಮೇಲೆ ಪ್ರೆಸ್ ಎಂದು ಬರೆಸಿಕೊಂಡು ಸಂಚರಿಸುತ್ತಿದ್ದು,
ಇವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಸೋಮವಾರ ಪಟ್ಟಣದ ಪೊಲೀಸ್ ಇಲಾಖೆ
ಪಿಎಸ್‌ಐ ಜಿ.ಪಾಂಡುರಂಗ ಅವರಿಗೆ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಪದಾಧಿಕಾರಿಗಳು ಮನವಿ
ಪತ್ರ ನೀಡಿದರು.
ಪಟ್ಟಣ ಸೇರಿದಂತೆ ತಾಲೂಕಿನ ನಾನಾ ಕಡೆಗಳಲ್ಲಿ ಪತ್ರಿಕೆಗೆ ಸಂಬಂಧವಿಲ್ಲದವರು ದ್ವಿಚಕ್ರ, ಕಾರುಗಳ
ಮುಂಭಾಗ,
ಹಿಂಭಾಗಗಳಲ್ಲಿ ಪ್ರೆಸ್ ಎಂದು ಬರೆದುಕೊಂಡು ತಿರುಗಾಡುತ್ತಾ, ಅವರಿವರ ಬಳಿ ಮಾದ್ಯಮದ
ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇಂಥಹ ವ್ಯಕ್ತಿಗಳನ್ನು ಪತ್ತೆಹಚ್ಚಿ ಇವರ ವಿರುದ್ಧ ಕಾನೂನು ಕ್ರಮ
ಜರುಗಿಸಬೇಕು ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.
ವಾರ್ತಾ ಮತ್ತು ಪ್ರಚಾರ ಇಲಾಖೆ ವ್ಯಾಪ್ತಿಗೆ ಒಳಪಡದ ಅನೇಕ ನಕಲಿ ಪತ್ರಕರ್ತರು ತಮ್ಮವಾಹನಗಳಿಗೆ
ಪ್ರೆಸ್ ಎಂದು ಬರೆಸಿಕೊಂಡು ಅಕ್ರಮ ಮಧ್ಯ ಮಾರಾಟ ಚಟುವಟಿಕೆ ಸೇರಿದಂತೆ ಇನ್ನಿತರ ದುಷ್ಕೃತ್ಯಗಳನ್ನು
ನಡೆಸುತ್ತಾ ಮಾಧ್ಯಮದ ಹೆಸರನ್ನು ದುರುಪಯೋಗ ಪಡಿಸಿಕೊಂಡು ಅಧಿಕೃತ ಪತ್ರಕರ್ತರ ಮಾನಹಾನಿ
ಮಾಡುತ್ತಿದ್ದಾರೆ ,ಇಂಥವರನ್ನು ಮಟ್ಟಹಾಕಬೇಕು ಎಂದು ಮನವಿ ಪತ್ರದಲ್ಲಿ ವಿವರಿಸಲಾಗಿದೆ.
ಸ್ಥಳದಲ್ಲಿ ಸಂಘದ ಅಧ್ಯಕ್ಷ ಎಸ್.ರಾಜಶೇಖರ್, ಕೆ.ಕೆಂಚಪ್ಪ, ಬಿ.ಜಿ.ಕೆರೆ ಬಸವರಾಜ್, ಕೊಂಡ್ಲಹಳ್ಳಿ
ಜಯಪ್ರಕಾಶ್, ಎಚ್.ಮಹಂತೇಶ್, ಕೆ.ಈರಣ್ಣ, ಡಿ.ಎನ್.ಗೋವಿಂದಪ್ಪ, ರಾಯಪುರದ ಗಂಗಾಧರ,ಚಿಕ್ಕೋಬನಹಳ್ಳಿ ಮಲ್ಲಿಕಾರ್ಜುನ್,
ಮಲ್ಲಿಕಾರ್ಜುನ್ ಕೆಂಧೂಳಿ, ಮಂಜುನಾಥ್, ಟಿ.ರುದ್ರೇಶ್, ಅಜ್ಜಪ್ಪ ಕೊಂಡ್ಲಹಳ್ಳಿ, ರವಿ ಇದ್ದರು.