ಚಳ್ಳಕೆರೆ : ನಿನ್ನೆ ನಡೆದ ಲಾರಿ ಮತ್ತು ಬೈಕ್ ನಡುವೆ ನಡೆದ ಅಪಘಾತದಲ್ಲಿ ಇಬ್ಬರು ಯುವಕರು ಸಾವನ್ನಪ್ಪಿದ ಕುಟುಂಬಸ್ಥರ ಮನೆಗೆ ಸಚಿವ ಬಿ ಶ್ರೀರಾಮುಲುರವರ ಆಪ್ತ ಸಹಾಯಕ ಭೇಟಿ ನೀಡಿ ಇಂದು ಸಾಂತ್ವನ ಹೇಳಿದ್ದಾರೆ.
ಚಳ್ಳಕೆರೆ ತಾಲೂಕಿನ ಮನುಮೈನಹಟ್ಟಿ ಸಮೀಪದಲ್ಲಿ ದಾವಣಗೆರೆ ಮಾರ್ಗವಾಗಿ ಚಲಿಸುತಿದ್ದ ಲಾರಿ ಹಾಗೂ ಚಳ್ಳಕೆರೆ ಮಾರ್ಗವಾಗಿ ಬಂದ ಬೈಕ್ ಈ ಎರಡು ವಾಹನಗಳ ಮಧ್ಯೆ ನಿನ್ನೆ ನಡೆದ ಅಪಘಾತದಲ್ಲಿ ಮನುಮೈನಹಟ್ಟಿ ಗ್ರಾಮದ ಮಹಾಂತೇಶ್ ನಾಯ್ಕ ಮತ್ತು ಕುಮಾರ್ ನಾಯ್ಕ ಇಬ್ಬರು ಸ್ಥಳದಲ್ಲಿ ಸಾವನ್ನಪ್ಪಿರುವ ಘಟನೆ ಈಡಿ ಗ್ರಾಮದಲ್ಲಿ ದುಃಖ ಮಡುಗಟ್ಟಿದೆ.
ಮೃತ ಕುಟುಂಬಸ್ಥರಿಗೆ ದೇವರು ಈ ನೋವನ್ನು ಭರಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸಿದರು
ಈ ಸಂದರ್ಭದಲ್ಲಿ ಪಟ್ಟಣ ಪಂಚಾಯಿತಿ ಸದಸ್ಯ ಎನ್ ಮಹಾಂತಣ್ಣ, ರಾಜೇಂದ್ರ ನಾಯಕ ಚಿತ್ರದುರ್ಗ, ನಿರಂಜನ್ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು