ಚಳ್ಳಕೆರೆ ನ್ಯೂಸ್ :
ಮಾದಕ ಸೇವನೆಯ ವಿರುದ್ಧ ಜನ ಜಾಗೃತಿ ಜಾಥಾವನ್ನು
ಹೊಳಲ್ಕೆರೆಯ ಕಣಿವೇ ಆಂಜನೇಯ ಸ್ವಾಮಿ ಟ್ರಸ್ಟ್, ಪೊಲೀಸ್
ಇಲಾಖೆ, ಪುರಸಭೆ ಆರೋಗ್ಯ ಇಲಾಖೆ ಹಾಗೂ ಶಿಕ್ಷಣ
ಇಲಾಖೆವತಿಯಿಂದ ಆಯೋಜಿಸಲಾಗಿತ್ತು.
ಜಾಗೃತಿ ಜಾಥಾವು
ಹೊಳಲ್ಕೆರೆಯ ಎಂ ಎಂ ಸರ್ಕಾರಿ ಕಾಲೇಜಿನಿಂದ ಹೊರಟು,
ತಹಶೀಲ್ದಾರ್ ಕಚೇರಿ ಹಾಗು ನಗರದ ಪ್ರಮುಖ ಬೀದಿಗಳಲ್ಲಿ
ಸಾಗಿತು.
ಈ ಸಮಯದಲ್ಲಿ ಮಾದಕ ವಸ್ತುಗಳ ಸೇವನೆಯಿಂದ
ಉಂಟಾಗುವ ದುಷ್ಪರಿಣಾಮಗಳ ಬಗ್ಗೆ ಪ್ಲಶ್ ಕಾರ್ಡ್ ಹಿಡಿದು ಜಾಗೃತಿ
ಮೂಡಿಸಲಾಯಿತು.