ಚಳ್ಳಕೆರೆ ನ್ಯೂಸ್ :
ಸುಡುಗಾಡು ಸಿದ್ಧರ ಕಾಲೋನಿಗೆ ಭೇಟಿನೀಡಿದ ಶಾಸಕ
ಎನ್ ವೈ ಗೋಪಾಲಕೃಷ್ಣ
ರಾಯಾಪುರ ಹೊರವಲಯದ ಸುಡುಗಾಡು ಸಿದ್ಧರ ಕಾಲೋನಿಗೆ
ಶಾಸಕ ಎನ್ ವೈ ಗೋಪಾಲಕೃಷ್ಣ ದಿಡೀರ್ ಭೇಟಿ ನೀಡಿದರು.
ಕಾಲೋನಿಯ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಿ ನಂತರ
ಸ್ಥಳೀಯವಾಗಿ ವಾಸಿಸುವ ಜನರ ಸಮಸ್ಯೆಯನ್ನು ಆಲಿಸಿದರು.
ಮಳೆ ಗಾಳಿ ಚಳಿಗೆ ಮೈಯೋಡ್ಲಿ ಇಲ್ಲಿ ನೂರಾರು ಅಲೆಮಾರಿ
ಕುಟುಂಬಗಳು ಜೀವ ಭಯದಲ್ಲಿ ಜೀವನ ಕಳೆಯಿತ್ತಿದ್ದೇವೆ,
ಇಲ್ಲಿ
ರಸ್ತೆಯೊಂದು ಬಿಟ್ಟರೆ ಇನ್ಯಾವ ಮೂಲಭೂತ ಸೌಕರ್ಯಗಳು ಇಲ್ಲಾ
ಎಂದು ನಿವಾಸಿಗಳು ಸಮಸ್ಯೆ ತೋಡಿಕೊಂಡರು.