ಪಟ್ಟಣದ ಬಿಜೆಪಿ ಕಚೇರಿ ಮುಂಭಾಗದಲ್ಲಿ ಮೂರನೇ ಬಾರಿ ಪ್ರಧಾನಮಂತ್ರಿ ಯಾಗಿ ಪ್ರಧಾನ ಮಂತ್ರಿ ನರೇಂದ್ರ ಮೋದಿಜಿ ಪದಗ್ರಹಣ ಸ್ವೀಕರಿಸಿದ ಪ್ರಯುಕ್ತ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ
ನಾಯಕನಹಟ್ಟಿ:: ಭಾರತೀಯ ಜನತಾ ಪಾರ್ಟಿ ಮೊಳಕಾಲ್ಮೂರು ಕ್ಷೇತ್ರ ಮಂಡಲ ವಿಶ್ವ ನಾಯಕ ನರೇಂದ್ರ ಮೋದಿಜಿ ರವರ 3ನೇ ಬಾರಿ ಪ್ರಧಾನ ಮಂತ್ರಿ ಪದಗ್ರಹಣ ಸ್ವೀಕರಿಸಿದ ಪ್ರಯುಕ್ತ ನಾಯಕನಹಟ್ಟಿ ಬಿಜೆಪಿ ಕಾರ್ಯಾಲಯದ ಮುಂಭಾಗದಲ್ಲಿ ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಾಚರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ನಗರ ಘಟಕ ಅಧ್ಯಕ್ಷರು ಹಾಗೂ ಮಾಜಿ ಪಟ್ಟಣ ಪಂಚಾಯತಿ ಅಧ್ಯಕ್ಷರಾದ ಎನ್.ಮಹಾಂತಣ್ಣ, ಮಂಡಲ ಪ್ರಧಾನ ಕಾರ್ಯದರ್ಶಿ ಬೆಂಕಿ ಗೋವಿಂದಪ್ಪ ,
ಜಿಲ್ಲಾ ಸಾಮಾಜಿಕ ಜಾಲತಾಣದ ಸದಸ್ಯ. ತಿಪ್ಪೇಶ್ ಹಟ್ಟೆರ್, ಮಂಡಲ ರೈತ ಮೋರ್ಚಾ ಪ್ರಧಾನ ಕಾರ್ಯದರ್ಶಿ, ಗಿಡ್ಡಾಪುರ ಬಿ ಬೋರಯ್ಯ, ತಿಪ್ಪೇಶ್ ರೇಖಲಗೆರೆ ಮಂಡಲ ಸದಸ್ಯರು, ಉಮೇಶ್ ನಾಯಕನಹಟ್ಟಿ ಶಕ್ತಿಕೇಂದ್ರದ ಪ್ರಮುಖರು, ಲೋಕೇಶ್ Nಮಹಾದೇವಪುರ ಭಾಗವಹಿಸಿದ್ದರು