ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶ್ರೀ ಟಿ ತಿಪ್ಪೇಸ್ವಾಮಿ ರವರು
ಬಯಲು ಸೀಮೆಯ ಅಭಿವೃದ್ಧಿ ಹರಿಕಾರ, ಶಿಕ್ಷಣ ಪ್ರೇಮಿ, ನೊಂದವರ ಬಾಳಿಗೆ ಬೆಳಕು ನೀಡುವ ಆಶಾಕಿರಣ ,
ಹ್ಯಾಟ್ರಿಕ್ ಸಾಧನೆಯ ಸರದಾರ ಶಾಸಕ ಟಿ.ರಘುಮೂರ್ತಿ ಹುಟ್ಟು ಹಬ್ಬ ಕೇವಲ ಆ ವ್ಯಕ್ತಿಯ ಹುಟ್ಟು ಹಬ್ಬವಾಗದೆ ನಮ್ಮ ನಿಮ್ಮೆಲ್ಲರ ಬಾಳಿನ ಬದಲಾವಣೆಯ ಹರಿಕಾರನ ಜನ್ಮದಿನದವಾಗಬೇಕಿದೆ ಎಂದು ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ.ತಿಪ್ಪೇಸ್ವಾಮಿ ಹೇಳಿದರು.
ಅವರು
ಚಳ್ಳಕೆರೆ ನಗರದ ಶಾಸಕರ ಗೃಹ ಕಛೇರಿಯಲ್ಲಿ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಟಿ ರಘುಮೂರ್ತಿ ರವರ ಹುಟ್ಟು ಹಬ್ಬದ ಪ್ರಯುಕ್ತ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಸಾರ್ವಜನಿಕ ಆಸ್ಪತ್ರೆಯಲ್ಲಿ ಇರುವ ರೋಗಿಗಳಿಗೆ ಹಣ್ಣು ಮತ್ತು ಬ್ರೆಡ್ ವಿತರಣೆ ಮಾಡಿ ಶಾಸಕರಿಗೆ ಶುಭ ಕೋರಿದರು.
ಈದೇ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೆ.ವೀರಭದ್ರಪ್ಪ, ಶಶಿಧರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷರಾದ ಗೀತಾ ಬಾಯಿ, ಹಿರಿಯ ಮುಖಂಡರಾದ ಟಿ.ಎ.ಟಿ.ಪ್ರಭುದೇವ್, ಸಿ. ವೀರೇಂದ್ರಬಾಬು, ಹಳೆನಗರದ ವೀರಭದ್ರಪ್ಪ, ದ್ಯಾವರನಹಳ್ಳಿ ತಿಪ್ಪೇಸ್ವಾಮಿ, ಚೌಳೂರು ಪ್ರಕಾಶ್, ಚನ್ನಗಾನಹಳ್ಳಿ ರುದ್ರಮುನಿ,
ಮಹಿಳಾ ಕಾಂಗ್ರೆಸ್ ಕಾರ್ಯಕಾರಣಿ ಸಮಿತಿಯ ಉಪಾಧ್ಯಕ್ಷರು, ಸದಸ್ಯರುಗಳು, ಮುಖಂಡರುಗಳು, ಕಾರ್ಯಕರ್ತರು, ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.