ಚಳ್ಳಕೆರೆ : ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತ ವಿರೋಧಿಗಳನ್ನು ತಂದು ರೈತರನ್ನು ದಿವಾಳಿ ಮಾಡಲು ಹೊರಟಿದೆ, ಈ ರೈತ ವಿರೋಧಿಗಳ ಕಾಯ್ದೆಗಳ ವಿರುದ್ದ ಸಂಘಟನೆಗಳ ನಿರಂತರವಾಗಿ ಹೋರಾಟ ಮಾಡಿದಕ್ಕೆ ಸರ್ಕಾರ ವಿರೋಧಿ ಕಾಯ್ದೆಗಳನ್ನು ಹಿಂಪಡೆದಿದೆ ಎಂದು ಶಾಸಕ ಟಿ.ರಘುಮೂರ್ತಿ ಹೇಳಿದರು.
ನಗರದ ವಾಲ್ಮೀಕಿ ಕಲ್ಯಾಣ ಮಂಟಪದಲ್ಲಿ ಎಐಯುಟಿಸಿ ವತಿಯಿಂದ ಮೇ 1 ಹಾಗು ಹುತಾತ್ಮರ, ರೈತ ಕಾರ್ಮಿಕರ 41ನೇ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು,
ಸರ್ಕಾರವು ಪ್ರಸ್ತುತ ಜಾರಿ ಮಾಡಿದ ಕಾಯ್ದೆಗಳಿಂದ ಭೂಮಿಯನ್ನು ಶ್ರೀಮಂತರ ಪಾಲಾಗುತ್ತಿದೆ. ಪ್ರಸ್ತುತ ಕೇಂದ್ರ ಮತ್ತು ರಾಜ್ಯದಲ್ಲಿರುವ ಸರ್ಕಾರಗಳು ಶ್ರೀಮಂತರ ಪರವಾಗಿರುಂತಹ ಸರ್ಕಾರ ಇದಾಗಿದೆ, ನೋವು ನುಂಗಿದವರಿಗೆ ಗೊತ್ತು ಜೀವನ ನಡೆಸುವುದು ಎಷ್ಟು ಕಷ್ಟ ಎನ್ನುವುದು. ಆ ನೋವು ಅಂಘಟಿತ ಕಾರ್ಮಿಕರಲ್ಲಿ ಇದೆ ಎಂದರು.
ಈ ವೇಳೆ ನಗರಸಭೆ ಅಧ್ಯಕ್ಷೆ ಸುಮಕ್ಕ, ಉಪಾಧ್ಯಕ್ಷೆ ಮಂಜುಳ, ಸದಸ್ಯೆ ಕವಿತಾ, ಎಐಟಿಯುಸಿ ಜಿಲ್ಲಾಧ್ಯಕ್ಷ ಶಿವರುದ್ರಪ್ಪ, ಸಿಪಿಐನ ಕಾರ್ಯದರ್ಶಿ ದೊಡ್ಡ ಉಳ್ಳಾರ್ತಿ ಕರಿಯಣ್ಣ, ಕಿಸಾನ್ ಸಂಘದ ಅಧ್ಯಕ್ಷ ಹನುಮಂತ ರೆಡ್ಡಿ, ಹಮಾಲರ ಸಂಘದ ಅಧ್ಯಕ್ಷ ತಿಪ್ಪೇರುದ್ರಪ್ಪ ಸೇರಿದಂತೆ ಮುಂತಾದವರು ಹಾಜರು ಇದ್ದರು.