ಚಳ್ಳಕೆರೆ ನ್ಯೂಸ್ :
ನಾವು ಕೂಲಿ ಮಾಡಿ ಜೀವನ ಸಾಗಿಸುವ ಕುಟುಂಬಗಳು ಪ್ರತಿದಿನ
ಕೂಲಿ ಹುಡುಕಿಕೊಂಡು ಕೆಲಸಕ್ಕೆ ಹೋಗುತ್ತೇವೆ.
ಇಂತಹ
ಸಮಯದಲ್ಲಿ ಪಡಿತರ ಅಕ್ಕಿಗಾಗಿ ಎರಡು ದಿನಗಳ ಕಾಲ ಕಾದು
ರೇಷನ್ ತೆಗೆದುಕೊಂಡು ಹೋಗಬೇಕು ಕಾದು ಕಾದು ಸಾಕಾಗುತ್ತಿದೆ.
ಬೆಳಗ್ಗೆ 6 ಗಂಟೆಯಿಂದಲೇ ನಾವು ಪಡಿತರ ಅಕ್ಕಿಗಾಗಿ ಕಾದು
ಕುಳಿತ್ತಿದ್ದೆವೆ ಎಂದು ನನ್ನಿವಾಳ ಗ್ರಾಂ ಪಂ ವ್ಯಾಪ್ತಿಯ ವಿವಿಧ
ಹಟ್ಟಿ ಫಲಾನುಭವಿಗಳು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ನನ್ನಿವಾಳ ಗ್ರಾಮದ ನ್ಯಾಯಬೆಲೆ ಅಂಗಡಿ ಮುಂದೆ ಆಕ್ರೋಶ
ವ್ಯಕ್ತಪಡಿಸಿದ್ದಾರೆ.