ಚಿತ್ರದುರ್ಗ : ಜಿಲ್ಲೆಯ ಕಂದಾಯ ಘಟಕದಲ್ಲಿ ಖಾಲಿ ಇರುವ 59 ಗ್ರಾಮಲೆಕ್ಕಾಧಿಕಾರಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವ ಕುರಿತಂತೆ
ಅಂತಿಮ ಆಯ್ಕೆ ಪಟ್ಟಿ ಹಾಗೂ ಕಾಯ್ದಿರಿಸಿದ ಪಟ್ಟಿಯನ್ನು ಪ್ರಕಟಿಸಿರುವ ಕುರಿತು ಚಿತ್ರದುರ್ಗ ಜಿಲ್ಲೆಯ ಜಿಲ್ಲಾಧಿಕಾರಿ ಹಾಗೂ ಗ್ರಾಮ ಲೆಕ್ಕಿಗರ ನೇರ ನೇಮಕಾತಿ ಆಯ್ಕೆ
ಸಮಿತಿಯ ಅಧ್ಯಕ್ಷರಾದ ಕವಿತಾ ಎಸ್. ಮನ್ನಿಕೇರಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.
ಮೇ9ರ 2022 ಹಾಗೂ ಮೇ. 10ರ 2022ರಂದು ಹಾಜರಾದ ಒಟ್ಟು 53 ಅಭ್ಯರ್ಥಿಗಳ ಮೂಲ ದಾಖಲಾತಿಗಳನ್ನು ಪಡೆಯಲಾಗಿದ್ದು, ಸದರಿ ದಿನಾಂಕಗಳಂದು ಒಟ್ಟು 124
ಅಭ್ಯರ್ಥಿಗಳು ಗೈರು ಹಾಜರಾಗಿರುತ್ತಾರೆ.
ಸದರಿ ದಿನಾಂಕಗಳಂದು ಗೈರುಹಾಜರಾದ ಅಭ್ಯರ್ಥಿಗಳು ದಿನಾಂಕ 21-05-2022ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5
ಗಂಟೆಯೊಳಗಾಗಿ ನೇಮಕಾತಿಗೆ ಸಂಬಂಧಿಸಿದ ತಮ್ಮ ಮೂಲ ದಾಖಲಾತಿಗಳನ್ನು ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣ, ಚಿತ್ರದುರ್ಗ ಇಲ್ಲಿ ಖುದ್ದು ಹಾಜರಾಗಿ ಸಲ್ಲಿಸಲು ಸೂಚಿಸಿ
ಮತ್ತೊಮ್ಮೆ ಅಂತಿಮ ಅವಕಾಶ ನೀಡಲಾಗಿದೆ.