ಚಳ್ಳಕೆರೆ : ಮಳೆಬಂದು ಬಾರೀ ಹಾನಿಯಾಗಿದೆ, ಗ್ರಾಮೀಣ ಪ್ರದೇಶಗಳಲ್ಲಿ ಜೆಜೆಎಂ ಯೋಜನೆಯ ಅಪೂರ್ಣವಾಗಿ ಗ್ರಾಮಗಳಲ್ಲಿ ರಸ್ತೆಯಲ್ಲಿ ಮಳೆನೀರು ನಿಂತು ಸಾರ್ವಜನಿಕರಿಗೆ ತೊಂದರೆಯಾಗಿವೆ ಆದ್ದರಿಂದ ಪಿಡಿಓಗಳು ಇದನ್ನು ಅರಿತು ಕೆಲಸ ಮಾಡಬೇಕು, ಎಂದು ಶಾಸಕ ಟಿ.ರಘುಮೂರ್ತಿ ಅಧಿಕಾರಿಗಳಿಗೆ ಖಡಕ್‌ಆಗಿ ಸೂಚನೆ ನೀಡಿದರು.
ಅವರು ಚಳ್ಳಕೆರೆ ನಗರದ ತಾಲ್ಲೂಕು ಪಂಚಾಯತ್ ಸಭಾಂಗಣದಲ್ಲಿ ನಡೆದ ತಾಲ್ಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಪಾಲ್ಗೊಂಡು ಕ್ಷೇತ್ರ ವ್ಯಾಪ್ತಿಯ ವಿವಿಧ ಕಾಮಗಾರಿಗಳ ಬಗ್ಗೆ ಚರ್ಚಿಸಿ ಪರಿಹಾರ ಕಲ್ಪಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ಚುನಾವಣೆಯ ನೀತಿಸಂಹಿತೆ ಜಾರಿ ಇರುವುದರಿಂದ ಕಳೆದ ಮೂರು ತಿಂಗಳಿAದ ಸಭೆ ಮಾಡಿರಲಿಲ್ಲ ಆದರೆ ಈಗ ಮಾಡುತ್ತಿದ್ದೆವೆ, ಇನ್ನೂ ದೊಡ್ಡರಿ ಗ್ರಾಮ ಪಂಚಾಯಿತಿಯಲ್ಲಿ ಶುದ್ದಕುಡಿಯುವ ನೀರು ಘಟಕಗಳು ನಡೆಯುತ್ತಾವೆ ಇಲ್ಲವೇ ಎಂಬ ವರದಿ ಬೇಕು, ಕೇವಲ ಸಭೆಯಲ್ಲಿ ಸರಿಯಿದಾವೆ ಎಂದು ಹೇಳಿ ನುಣುಚಿಕೊಳ್ಳುವುದು ಬೇಡ ಪಕ್ಕ ಮಾಹಿತಿ ಬೇಕು ಜಿಲ್ಲಾ ಮಟ್ಟದಲ್ಲಿ ಜಿಲ್ಲಾಧಿಕಾರಿಗಳಿಗೆ, ಮುಖ್ಯ ಕಾರ್ಯನಿರ್ವಾಹಕಧಿಕಾರಿಗಳ ಸಭೆಯಲ್ಲಿ ಬರೀ ಅಂಕಿಅAಶ ಹೇಳಿದಾಗೆ ಹೇಳುವುದು ಬೇಡ ನನಗೆ ಪಕ್ಕ ಮಾಹಿತಿ ಬೇಕು ಒಂದು ವೇಳೆ ಸುಳ್ಳು ಮಾಹಿತಿ ನೀಡಿದರೆ ವಾಸ್ತವವಾಗಿ ಹಳ್ಳಿಗಳ ಮಾಹಿತಿ ಪರೀಶಿಲಿಸಿ ಹೇಳಿ ಎಂದರು.
ಮಳೆ ಬಂದ ತಕ್ಷಣ ಬೋರ್‌ವೆಲ್‌ನಲ್ಲಿ ನೀರು ಬರುವುದಿಲ್ಲ ಆದ್ದರಿಂದ ಈಗ ಕೊಡುವ ನೀರು ಮುಂದುವರೆಸಿ ಕೇವಲ ಆದೇಶ ಬಂದಿದೆ ನಿಲ್ಲಿಸಬೇಕು ಎನ್ನುವುದು ಬೇಡ ಕುಡಿಯುವ ನೀರಿನ ಮೂಲ ಹಾಗೂ ಹಾನಿಯಾದ ಸ್ಥಳಗಳ ಬಗ್ಗೆ ಮಾಹಿತಿ ಹೇಳಿ, ನನ್ನಿವಾಳ ಪಂಚಾಯತಿಯಲ್ಲಿ ಹತ್ತು ಶುದ್ಧ ಘಟಕಗಳು ರೀಪೆರಿ ಇವೆ ಎಂದರೆ ಅಲ್ಲಿನ ಜನಗಳ ಪರಸ್ಥಿತಿ ಏನು ಕುಡಿಯುವ ನೀರು ಕೊಡಲು ಹಾಗುವುದಿಲ್ಲವಾದರೆ ಹೇಗೆ ಎಂದು ಅಧಿಕಾರಿಗಳಿ ಚಳಿ ಬಿಡಿಸಿದರು.
ಇನ್ನೂ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ ಸಾಮಾಗ್ರಿಗಳು ಕಳುವಾದರೆ ಪ್ರಕರಣ ದಾಖಲಿಸಿ ಪೊಲೀಸ್ ತನಿಖೆ ಕೈಗೊಳ್ಳಿ, ಎಂದು ಪಿಎಸ್‌ಐ ಕೆ.ಸತೀಶ್ ನಾಯ್ಕ್ ತಿಳಿಸಿದರು, ಸರಕಾರದ ವಸ್ತುಗಳಿಗೆ ಬೆಲೆ ಇಲ್ಲವೇ ಖಾಸಗಿ ವಸ್ತುಗಳಾದರೆ ಪ್ರಕರಣ ದಾಖಲಿಸಿ ತನಿಖೆ ಮಾಡುವ ರೀತಿಯಲ್ಲಿ ಕಾಳಜಿವಹಿಸಿ ಎಂದರು.
ಪಿಡಿಓ ಇನಾಯಿತ್ ಭಾಷ್ ಸಭೆಯ ಗಮನಕ್ಕೆ ತಂದು ನನ್ನಿವಾಳ ಗುಡ್ಡದಿಂದ ಮನೆಗಳಿಗೆ ಮಳೆನೀರು ನುಗ್ಗಿ ಹಾನಿಯಾಗುತ್ತದೆ ಮಳೆ ಬಂದು ಹಾನಿಯಾದಕ್ಕೆ ಪರಿಹಾರ ನೀಡಬೇಕು, ಇದಕ್ಕೆ ಶಾಶ್ವತ ಪರಿಹಾರ ತಡೆಗೊಡೆ ನಿರ್ಮಿಸಿಕೊಡಬೇಕು ಎಂದರು.
ಮಳೆ ಬಂದು ಹಾನಿಯಾದಗ ಸಾಂಕ್ರಾಮಿಕ ರೋಗಗಳು ಪತ್ತೆಯಾಗುತ್ತಾವೆ ಆದರಂತೆ ಕಳೆದ ದಿನಗಳಲ್ಲಿ ನಡೆದ ಪ್ರಕರಣ ಚಿತ್ರದುರ್ಗದ ಕವಾಡಿಗರ ಹಟ್ಟಿ ಪ್ರಕರಣ ನೆನಪಿಸಿಕೊಳ್ಳಿ ಎಂದು ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಕುಡಿಯುವ ನೀರಿನಿಂದ ರೋಗ ಹರಡಿದೆ ಎಂಬ ಸುದ್ದಿ ಶಾಸಕರು ಹೇಳಿದಾಗ ಡಾ.ಕಾಶಿ ಮಾತನಾಡಿ ನಮ್ಮ ಆರೋಗ್ಯ ಇಲಾಖೆ ವರದಿಯಡಿಯಲ್ಲಿ ಕುಡಿಯುವ ನೀರಿನಿಂದ ವರದಿ ಬಂದಿದೆ ಆದ್ದರಿಂದ ಒಡೆದ ಪೈಪ್‌ಲೈನ್ ಕಾರಣ ಹಾಗೂ ಶುದ್ದವಾದ ನೀರು ಕೊಡುವ ವ್ಯವಸ್ಥೆ ಕಲ್ಪಿಸಬೇಕು ಎಂದು ಸಭೆಯ ಗಮನಕ್ಕೆ ತಂದರು.
ತುರುವನೂರು ಹೋಬಳಿಯ ಮಾಡನಯಕನಹಳ್ಳಿ ಗ್ರಾಮಕ್ಕೆ ನಿರಂತರ ಜ್ಯೋತಿ ವಿದ್ಯುತ್ ಕಂಬ ಹಾಕಬೇಕು ಇದರಿಂದ ವ್ಯಾಸಂಗ ಮಾಡುವ ಮಕ್ಕಳಿಗೆ ಹಾಗೂ ಕುಡಿಯುವ ನೀರಿನ ಸಮಸ್ಯೆ ಉಲ್ಬಣಿಸುವುದಿಲ್ಲ ಎಂದು ಪಿಡಿಓ ಸಭೆಯ ಗನಮಕ್ಕೆ ತಂದರು.
ಶಾಸಕರು ಸಭೆಯ ಮಧ್ಯೆ ಅಧಿಕಾರಿಗಳಿಗೆ ನೀತಿಸಂಹಿತೆ ಇದೆ ಎಂದು ನೆಪ ಹೇಳಿ ಕಾಮಗಾರಿ ಮುಂದುಡಬೇಡಿ, ಆದರೆ ಅತೀ ತುರ್ತಾಗಿ ಕುಡಿಯುವ ನೀರು ಕೊಡುವ ವ್ಯವಸ್ಥೆ ಹಾಗಬೇಕು ರಾಜಾಕರಣಿಗಳಿಗೆ ಹಾಗೂ ಕೆಲವು ಯೋಜನೆಗಳಿಗೆ ಮಾತ್ರ ಇದೆ ಆದರೆ ನೀವುಗಳು ಎಲ್ಲಾ ಹಂತಕ್ಕೆ ನೀತಿಸಂಹಿತೆ ಇದೆ ಎಂದು ಸಮಸ್ಯೆ ಮಾಡಬಾರದು ಎಂದರು.
ಇದೇ ಸಂಧರ್ಭದಲ್ಲಿ ತಹಶಿಲ್ದಾರ್ ರೇಹಾನ್ ಪಾಷ, ಇಓ ಲಕ್ಷ್ಮಣ್, ಚಿತ್ರದುರ್ಗ ತಹಶಿಲ್ದಾರ್ ನಾಗವೇಣಿ, ಚಿತ್ರದುರ್ಗ ಇಓ ಅನಂತರಾಜ್, ಜಂಟಿ ಕೃಷಿ ನಿರ್ದೇಶಕ ಮಂಜುನಾಥ್, ನಗರಸಭೆ ಪೌರಾಯುಕ್ತ ಜೀವನ ಕಟ್ಟಿಮನಿ, ತಾಪಂ.ಸಹಾಯಕ ನಿರ್ದೇಶಕ ಸಂಪತ್, ಸಂತೋಷ ಕುಮಾರ್, ಬಿಇಓ ಕೆ.ಎಸ್.ಸುರೇಶ್, ಕೃಷಿ ಅಧಿಕಾರಿ ಅಶೋಕ, ತೋಟಗಾರಿಕೆ ಅಧಿಕಾರಿ ವಿರೂಪಾಕ್ಷಪ್ಪ, ಪಶು ಇಲಾಖೆ ಅಧಿಕಾರಿ ರೇವಣ್ಣ, ಹಾಗು ತುರವನೂರು ಹೋಬಳಿಯ ಹಾಗೂ ಕಸಬಾ ಹೋಬಳಿ ಹಾಗೂ ತಾಲೂಕು ಮಟ್ಟದ ಎಲ್ಲಾ ಅಧಿಕಾರಿಗಳು, ಪಿಡಿಓಗಳು ಪಾಲ್ಗೊಂಡಿದ್ದರು.