ಚಿತ್ರದುರ್ಗ : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ನಗರದ ನಗರದ ಡಿ.ಸಿ ಸರ್ಕಲ್ ಹತ್ತಿರವಿರುವ ಹೇಮರೆಡ್ಡಿ ಮಲ್ಲಮ್ಮ ಸಭಾಂಗಣದಲ್ಲಿ ಮೇ 15 ರಂದು
ಭಾನುವಾರ ಬೆಳಿಗ್ಗೆ 11 ಗಂಟೆಗೆ ಚೈತ್ರದ ಚಿಗುರು ಜಿಲ್ಲಾ ಮಟ್ಟದ ಕವಿಗೋಷ್ಠಿ, ಕಾರ್ಯಕ್ರಮ ಏರ್ಪಡಿಸಲಾಗಿದೆ.
ಕಸಾಪ ಮಾಜಿ ಜಿಲ್ಲಾಧ್ಯಕ್ಷ ಕೆ.ಎಂ.ವೀರೇಶ್ ಕಾರ್ಯಕ್ರಮ ಉದ್ಘಾಟಿಸುವರು. ನಿವೃತ್ತ
ಪ್ರಾಚಾರ್ಯ ಹಾಗೂ ಸಾಹಿತಿ ಡಾ.ಸಿ.ಶಿವಲಿಂಗಪ್ಪ ಆಶಯ ನುಡಿವರು. ಕಸಾಪ ಜಿಲ್ಲಾಧ್ಯಕ್ಷ
ಕೆ.ಎಂ.ಶಿವಸ್ವಾಮಿ ಅಧ್ಯಕ್ಷತೆ ವಹಿಸುವರು.
ಚಿತ್ರದುರ್ಗ ಜಿಲ್ಲೆಯ 20ಕ್ಕೂ ಹೆಚ್ಚು
ಉದಯೋನ್ಮಖ ಕವಿಗಳು ಕವನ ವಾಚನ ಮಾಡುವರು. ಕಾರ್ಯಕ್ರಮ ಸಂಚಾಲಕ
ವಿ.ಧನಂಜಯ ಉಪಸ್ಥಿತರಿರುವರು ಎಂದು ಕಸಾಪ ಗೌರವ ಕಾರ್ಯದರ್ಶಿಗಳಾದ ಶಿಕ್ಷಕ
ಬಿ.ವಿ.ನಾಥ್, ರಂಗನಿರ್ದೇಶಕ ಕೆಪಿಎಂ ಗಣೇಶಯ್ಯ ಪತ್ರಿಕಾ ಪ್ರಕಟಣೆ ತಿಳಿಸಿದ್ದಾರೆ.