ರಾಮಾAಜನೇಯ ಕೆ.ಚನ್ನಗಾನಹಳ್ಳಿ
ಚಳ್ಳಕೆರೆ : ರಾಜ್ಯಾದ್ಯಂತ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳು ಆರಂಭಗೊAಡರೂ, ಈವರೆಗೆ ಶಿಕ್ಷಣ ಇಲಾಖೆ ಮಾತ್ರ ಅನಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿಲ್ಲ.
ಈಗಾಗಲೇ ಅಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿ ಪೋಷಕರ ಗಮನಕ್ಕೆ ಸೂಚನ ಫಲಕಕ್ಕೆ ಹಾಕಿಬೇಕಿತ್ತು ಆದರೆ ಅದರ ಗೋಜಿಗೂ ಹೋಗದೆ ಕೇವಲ ಮೇಲುಸ್ತೂವಾರಿ ಮಾತ್ರ ವಹಿಸದೆ ಎನ್ನುವಂತಾಗಿದೆ.
ಹೌದು, ರಾಜ್ಯದಲ್ಲಿ ಪ್ರತಿವರ್ಷ ಸಾವಿರಾರು ವಿದ್ಯಾರ್ಥಿಗಳು ಅನಧಿಕೃತ ಶಾಲೆಗಳಲ್ಲಿ ಪ್ರವೇಶ ಪಡೆದು, ಬಳಿಕ ಭಾರಿ ಸಮಸ್ಯೆ ಎದುರಿಸುವುದು ಸಾಮಾನ್ಯವಾಗಿದೆ. ಇನ್ನು ಕೆಲವೊಮ್ಮೆ ಅನಧಿಕೃತ ಶಾಲೆಯಾಗಿದ್ದರೂ, ನೂರಾರು ವಿದ್ಯಾರ್ಥಿಗಳ ಭವಿಷ್ಯ ನೋಡಿಕೊಂಡು, ಶಾಲೆಯನ್ನು ಮುಂದುವರಿಸಲು ಅಧಿಕಾರಿ ಅವಕಾಶ ನೀಡುತ್ತಾರೆ.
ಈ ಎಲ್ಲ ಸಮಸ್ಯೆ ಬಗೆಹರಿಸಲು ರಾಜ್ಯದಲ್ಲಿರುವ ಅನಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆಗೊಳಿಸುವಂತೆ ಹಲವು ಬಾರಿ ಒತ್ತಡವನ್ನು ಶಿಕ್ಷಣ ಇಲಾಖೆ ಮೇಲೆ ಹೇರಿದ್ದರೂ, ಯಾವುದೇ ಅಧಿಕೃತ ಪಟ್ಟಿಯ ಬಗ್ಗೆ ಕ್ರಮವಹಿಸಿಲ್ಲ ಎನ್ನುವುದು ಖಾಸಗಿ ಶಿಕ್ಷಣ ಸಂಸ್ಥೆಗಳ ಹಾಗೂ ಪೋಷಕರ ಅಸಮಾಧಾನವಾಗಿದೆ.


ಶೈಕ್ಷಣಿಕ ವರ್ಷ ಆರಂಭವಾಗುವ ಮುನ್ನ ಅನಧಿಕೃತ ಶಾಲೆಗಳ ಪಟ್ಟಿಯನ್ನು ಶಿಕ್ಷಣ ಇಲಾಖೆ ಬಿಡುಗಡೆ ಮಾಡಬೇಕು ಎನ್ನುವ ನಿಮಯವಿದೆ. ಆದರೆ ಈ ಬಾರಿ ಈ ರೀತಿಯ ಯಾವುದೇ ಪ್ರಕ್ರಿಯೆ ನಡೆದಿಲ್ಲ, ಇನ್ನೂ ಚಿತ್ರದುರ್ಗ ಕ್ಷೇತ್ರ ಶಿಕ್ಷಣಾಧಿಕಾರಿ ಮಾತ್ರ ತಾಲೂಕಿನಲ್ಲಿ ಇರುವ ಅನಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದಾರೆ. ಈ ಮೂಲಕ ಅನಧಿಕೃತವಾಗಿ ಶಾಲೆಗಳನ್ನು ನಡೆಸುವವರ ಪರವಾಗಿ ಶಿಕ್ಷಣ ಇಲಾಖೆ ನಿಂತಿದೆಯೇ ಎನ್ನುವ ಅನುಮಾನ ವ್ಯಕ್ತವಾಗುತ್ತದೆ ಎಂದು ಖಾಸಗಿ ಶಾಲಾ ಸಂಘಟನೆಯ ಪದಾಧಿಕಾರಿಗಳು ಹೊರಹಾಕಿದ್ದಾರೆ.
ಶಿಕ್ಷಣ ಇಲಾಖೆಯಲ್ಲಿ ಕೇವಲ ಅಧಿಕೃತ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿದೆ. ಆದರೆ, ಅನಧಿಕೃತ ಪಟ್ಟಿಯನ್ನು ಇದುವರೆಗೂ ಬಿಡುಗಡೆ ಮಾಡಿಲ್ಲ. ಇದರಿಂದ ಪೋಷಕರು ಈಗಾಗಲೇ ತಮ್ಮ ಮಕ್ಕಳನ್ನು ದಾಖಲು ಮಾಡಿದ್ದಾರೆ. ಅದು ಅಧಿಕೃತವೋ ಅನಧಿಕೃತವೋ ಎಂಬುದು ತಿಳಿಯದೇ ಗೊಂದಲಕ್ಕೆ ಒಳಗಾಗಿದ್ದಾರೆ.


ತಾಲೂಕಿನಲ್ಲಿ ಕೊವಿಡ್ ನಂತರದ ದಿನಗಳಲ್ಲಿ ಅನಧಿಕೃತ ಶಾಲೆಗಳು ನಾಯಿ ಕೊಡೆಗಳಂತೆ ತಲೆ ಎತ್ತಿದ್ದು ಕಡಿವಾಣ ಹಾಕಬೇಕಿದ್ದ ಶಿಕ್ಷಣ ಇಲಾಖೆ ದಿವ್ಯ ನಿರ್ಲಕ್ಷ ವಹಿಸಿದೆ. ವಸತಿ ಗೃಹಗಳಲ್ಲಿ ಪ್ರೀ ನರ್ಸರಿಯಿಂದ ಪ್ರಾರಂಭವಾಗುವ ಶಾಲೆಗಳು ಇವೆ, ಶಿಕ್ಷಣ ಇಲಾಖೆ ಮಾತ್ರ ಅನಧಿಕೃತ ಶಾಲೆಗಳ ಪಟ್ಟಿ ನೀಡದೆ ಈಗ 50 ಅಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಮಾಡಿದೆ. ಆದರೆ, ಅನಧಿಕೃತ ಶಾಲೆಗಳ ಪಟ್ಟಿಯನ್ನು ಮಾತ್ರ ಬಿಡುಗಡೆ ಮಾಡಿಲ್ಲ. ಇದು ಗೊಂದಲಕ್ಕೆ ಒಳಗಾಗಿದೆಯಲ್ಲದೆ, ಅನಧಿಕೃತ ಶಾಲೆಗಳ ಹೆಸರನ್ನು ಪ್ರಕಟಿಸದಿರಲು ಕಾರಣವೇನು ಎನ್ನುವುದಕ್ಕೆ ಶಿಕ್ಷಣ ಇಲಾಖೆಯ ಬಳಿ ಉತ್ತರವಿಲ್ಲವಾಗಿದೆ.


ಹೇಳಿಕೆ :1
ಶಾಲೆಗಳು ಪ್ರಾರಂಭವಾಗಿ ಮಕ್ಕಳು ಖುಷಿಯಾಗಿ ಶಾಲೆಗೆ ಹೋಗುತ್ತಿದ್ದಾರೆ, ಇದರ ಮಧ್ಯೆ ಪೋಷಕರ ಗಮನಕ್ಕೆ ಆಯಾ ತಾಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಅಧಿಕೃತ ಹಾಗೂ ಅನಧಿಕೃತ ಶಾಲೆಗಳ ಪಟ್ಟಿಯನ್ನು ತಮ್ಮ ಕಛೇರಿ ಸೂಚನ ಫಲಕದಲ್ಲಿ ಹಾಕಬೇಕು, ಇನ್ನೂ ದುಬಾರಿ ಶುಲ್ಕಕಕ್ಕೆ ಕಡಿವಾಣ ಹಾಕಲು ಕಟ್ಟುನಿಟ್ಟಿನ ಕ್ರಮವಹಿಸಲು ಡಿಡಿಪಿಐಗೆ ಸೂಚಿಸಲಾಗುವುದು.–ಟಿ.ವೆಂಕಟೇಶ್, ಜಿಲ್ಲಾಧಿಕಾರಿಗಳು ಚಿತ್ರದುರ್ಗ

ಹೇಳಿಕೆ :2
ತಾಲೂಕಿನಲ್ಲಿ ಸುಮಾರು 50 ಅಧಿಕೃತ ಶಾಲೆಗಳ ಪಟ್ಟಿ ಬಿಡುಗಡೆಗೊಳಿಸಿರುವ ಇಲಾಖೆ, ಅನಧಿಕೃತ ಶಾಲೆಗಳ ಪಟ್ಟಿ ಬಿಡುಗಡೆ ಯಾಗದಿದ್ದರೆ, ಹೇಗೆ ಅಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಿರುವ ಶಿಕ್ಷಣ ಇಲಾಖೆ ಅನಧಿಕೃತ ಶಾಲೆಗಳ ಪಟ್ಟಿಯನ್ನು ಏಕೆ ಬಿಡುಗಡೆ ಮಾಡಿಲ್ಲ ಎಂಬುದು ಗೊಂದಲ ಪೋಷಕರಲ್ಲಿ ಮೂಡುತ್ತದೆ ಆದಷ್ಟು ಬೇಗ ಅನಧಿಕೃತ ಶಾಲೆಗಳ ಪಟ್ಟಿ ಹಾಗೂ ಅಧಿಕೃತ ಶಾಲೆಗಳ ಪಟ್ಟಿ ಸೂಚನ ಫಲಕದಲ್ಲಿ ಹಾಕಬೇಕು.. —

ಕೆ.ಪಿ.ಭೂತಯ್ಯ ಉಪಾಧ್ಯಕ್ಷರು, ರಾಜ್ಯ ರೈತ ಸಂಘ.

ಹೇಳಿಕೆ :3
ಶಾಲೆಗಳು ಆರಂಭವಾಗುವುದಕ್ಕೆ ಮುಂಚಿತವಾಗಿಯೇ ಅನಧಿಕೃತ ಶಾಲೆಗಳ ಪಟ್ಟಿಯನ್ನು ಬಿಡುಗಡೆ ಮಾಡಬೇಕು. ಆದರೆ, 6ದಿನಗಳು ಕಳೆದರು ಇದುವರೆಗೆ ಏಕೆ ಬಿಡುಗಡೆ ಮಾಡಿಲ್ಲ. ಈ ಗೊಂದಲವನ್ನು ಶಿಕ್ಷಣ ಇಲಾಖೆ ಸರಿಪಡಿಸಬೇಕು ಖಾಸಗಿ ಶಾಲೆಗಳ ದುಬಾರಿ ಶುಲ್ಕದ ಹಾವಳಿ ತಪ್ಪಿಸಬೇಕು ಇದಕ್ಕೆ ಕಡಿವಾಣ ಹಾಕಬೇಕು.-

ನೇತಾಜಿ ಪ್ರಸನ್ನ, ಸ್ಥಾಯಿ ಸಮಿತಿ ಸದಸ್ಯರು, ನಗರಸಭೆ ಚಳ್ಳಕೆರೆ

ಹೇಳಿಕೆ :4
ತಾಲೂಕಿನಲ್ಲಿ ವಸತಿ ಗೃಹಗಳಲ್ಲಿ ಶಾಲೆಗಳು ಮಾಡುವುದು ಗಮನಕ್ಕೆ ಬಂದಿದೆ, ಆದರೆ ಶಿಕ್ಷಣ ಇಲಾಖೆ ಇದರ ಬಗ್ಗೆ ಗಂಭೀರವಾಗಿ ಪರಿಗಣಿಸಿ, ಶಿಕ್ಷಣ ಇಲಾಖೆ ನಿಯಮಗಳಿಗೆ ಒಳಪಡದೆ ಇದ್ದರೆ ಕಡಿವಾಣ ಹಾಕಬೇಕು, ಮಕ್ಕಳ ಭವಿಷ್ಯದ ಜೊತೆಗೆ ಶಿಕ್ಷಣ ಇಲಾಖೆ ಚೆಲ್ಲಾಟ ಆಡಬಾರದು ಸ್ಥಳಾಂತರಗೊAಡ ಶಾಲೆಗಳ ಬಗ್ಗೆ ಶಿಕ್ಷಣ ಇಲಾಖೆ ಗಮನಹರಿಸಬೇಕು ಕೇವಲ ವಿದ್ಯಾರ್ಜನೆ ಎಂದು ನೆಪವೊಡ್ಡಿ, ಮಕ್ಕಳಿಗೆ ತೊಂದರೆಯಾಗಬಾರದು ಅಧಿಕೃತ ಹಾಗೂ ಅನಧಿಕೃತ ಶಾಲೆಗಳ ಬಗ್ಗೆ ಮಾಹಿತಿ ಬಹಿರಂಗ ಪಡಿಸಬೇಕು ಇಲ್ಲವಾದರೆ ಪ್ರತಿಭಟನೆಯ ಹೋರಾಟದ ಹಾದಿ ಹಿಡಿಬೇಕಾಗುತ್ತದೆ.—-

ರೆಡ್ಡಿಹಳ್ಳಿ ವೀರಣ್ಣ ರಾಜ್ಯ ಉಪಾಧ್ಯಕ್ಷ, ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ

Namma Challakere Local News
error: Content is protected !!