ಚಳ್ಳಕೆರೆ ನ್ಯೂಸ್ :
ಬಯಲು ಸೀಮೆಯಲ್ಲಿ ವರುಣನ ಕೃಪೆಯಿಂದ ಹಳ್ಳ ಕೊಳ್ಳಗಳು ಭರ್ತಿಯಾಗಿ ರೈತ ನಿಟ್ಟುಸಿರು ಬಿಟ್ಟಿದ್ದಾನೆ
ಹೌದು ಅತೀ ಕಡಿಮೆ ಮಳೆ ಬೀಳುವ ಪ್ರದೇಶ ಚಳ್ಳಕೆರೆ ಇಂತಹ ತಾಲೂಕಿನಲ್ಲಿ ಮಳೆರಾಯ ಕಳೆದ ಒಂದು ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಬರುವ ಮೂಲಕ ಅಂತರ್ಜಲ ವೃದ್ದಿಗೆ ಕಾರಣವಾಗಿದೆ.
ಇನ್ನೂ ಚಳ್ಳಕೆರೆ ತಾಲೂಕಿನ ನಾಲ್ಕು ಹೋಬಳಿಗಳಲ್ಲಿ ಸಮೃದ್ದಿ ಮಳೆಯಾಗುವ ಮೂಲಕ ರೈತ ಮುಂಗಾರು ಬೆಳೆಗೆ ಹೊಲಗಳನ್ನು ಹಸನು ಮಾಡುತ್ತಾ ಬೀಜ ಗೊಬ್ಬರದ ಮೊರೆ ಹೋಗಿದ್ದಾನೆ.
ಅದರಂತೆ ಇಂದು ಮಧ್ಯಾಹ್ನ ಒಂದು ಗಂಟೆಗೆ ಪ್ರಾರಂಭವಾದ ಮಳೆರಾಯ ಸಂಜೆ ಐದು ಗಂಟೆವರೆಗೂ ಮಳೆ ಬರುವ ಮೂಲಕ ನಗರದಲ್ಲಿ ಚರಂಡಿಗಳು ಭರ್ತಿಯಾಗಿ 8 ಮತ್ತು 9 ನೇ ವಾರ್ಡ್ ಗಳಲ್ಲಿ ಮನೆಗೆ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತವಾಗಿದೆ ಎಂದು ವರದಿಯಾಗಿದೆ.