ಚಳ್ಳಕೆರೆ ನ್ಯೂಸ್ :
ಭಾರಿ ಮಳೆಗೆ ಅಂಡರ್ ಪಾಸ್ ಜಲಾವೃತ
ಮೊಳಕಾಲೂರು ತಾಲೂಕಿನ ರಾಂಪುರ ಗ್ರಾಮದ ರಾಷ್ಟ್ರೀಯ
ಹೆದ್ದಾರಿ 150ಎ ರಲ್ಲಿನ ಅಂಡರ್ ಪಾಸ್ ಜಲಾವೃತಗೊಂಡಿತ್ತು.
ತಾಲೂಕಿನ ವಿವಿಧ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಅಂಡರ್ ಪಾಸ್‌ನಲ್ಲಿ
ನೀರು ನಿಂತ ಪರಿಣಾಮ ವಾಹನ ಸವಾರರು ಹೈರಾಣಾದರು.
ನೀರಿನಲ್ಲಿ ವಾಹನ ತಳ್ಳಿಕೊಂಡು ಓಡಾಡುವಂತಹ ಪರಿಸ್ಥಿತಿ
ನಿರ್ಮಾಣವಾಗಿದೆ. ಮಳೆಗೆ ಕೆಲವು ಕಡೆ ಬೆಳೆಗಳು ಸಹ
ಹಾನಿಗೊಳಗಾಗಿವೆ.