ಚಳ್ಳಕೆರೆ ನ್ಯೂಸ್ :
ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ
ಪ್ರತಿಭಟಿಸಿದ ರೈತರು
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ರೈತರು
ಹೊಳಲ್ಕೆರೆ ಕೃಷಿ ಇಲಾಖೆ ಕಚೇರಿ ಮುಂದೆ ಪ್ರತಿಭಟನೆ ನಡೆಸಿ
ಮನವಿ ನೀಡಿದರು.
ಹೊಳಲ್ಕೆರೆ ತಾಲ್ಲೂಕಿನ ಎಲ್ಲಾ ರಸಗೊಬ್ಬರ
ಅಂಗಡಿಗಳಲ್ಲಿ, ರೈತರಿಗೆ ಕಾಣುವಂತೆ ಬಿತ್ತನೆ ಬೀಜ, ಗೊಬ್ಬರಗಳ
ದರ ಪ್ರಕಟಿಸಬೇಕು.
ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರಾಟ
ಮಾಡುವ ಅಂಗಡಿಗಳ ಪರವಾನಿಗೆ ರದ್ದು ಮಾಡಬೇಕು.
ಅಕ್ರಮವಾಗಿ ರಸ ಗೊಬ್ಬರ ದಾಸ್ತಾನು ಮಾಡಿ ಹೆಚ್ಚಿನ ದರಕ್ಕೆ
ಮಾರಾಟ ಮಾಡುವ ಅಂಗಡಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು
ಎಂದು ಒತ್ತಾಯಿಸಿದರು.