ಚಳ್ಳಕೆರೆ : ಕುಟುಂಬದ ವಾರ್ಷಿಕ ಆದಾಯ ರೂ.32ಸಾ.ಕ್ಕಿಂತ ಕಡಿಮೆ ಇರುವ ವೃದ್ಧರು, ವಿಶೇಷ ಚೇತನರು, ವಿಧವೆಯರು ಹಾಗೂ ಅವಿವಾಹಿತ ಅಥವಾ ವಿಚ್ಛೇದಿತ ಮಹಿಳೆಯರು ಮಾಸಿಕ ಪಿಂಚಣಿ ಸೌಲಭ್ಯಕ್ಕಾಗಿ ದೂರವಾಣಿ ಮುಖೇನ ಕೋರಿಕೆ ಸಲ್ಲಿಸಬಹುದು ಎಂದು ಗ್ರೇಡ್2 ತಹಶೀಲ್ದಾರ್ ಸಂಧ್ಯಾ ಹೇಳಿದ್ದಾರೆ.
ಅವರು ನಗರದ ತಾಲೂಕು ಕಚೇರಿಯಲ್ಲಿ ಆಯೊಜಿಸಿದ್ದ 72 ಗಂಟೆಯಲ್ಲಿ ನಿಮ್ಮ ಮನೆ ಬಾಗಿಲಿಗೆ ಪಿಂಚಣಿ ಆದೇಶ ಎನ್ನುವ ನೂತನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿರು,
ನಾಗರಿಕರು ಶುಲ್ಕರಹಿತ ಸಂಖ್ಯೆ 155245ಗೆ ಉಚಿತವಾಗಿ, ದೂರವಾಣಿ ಕರೆ ಮೂಲಕ ಕಡ್ಡಾಯವಾಗಿ ತಮ್ಮ ಆಧಾರ್ ಸಂಖ್ಯೆ ಒದಗಿಸಿ ಪಿಂಚಣಿ ಸೌಲಭ್ಯ ಕೋರಿಕೆ ಸಲ್ಲಿಸಬಹುದು.
ತಮ್ಮ ವ್ಯಾಪ್ತಿಯ ಗ್ರಾಮ ಲೆಕ್ಕಾಧಿಕಾರಿಗಳು ಅರ್ಜಿದಾರರ ಮನೆಬಾಗಿಲಿಗೆ ಭೇಟಿ ನೀಡಿ “ನವೋದಯ” ಮೊಬೈಲ್ ಆ್ಯಪ್ ಮೂಲಕ ಅರ್ಜಿದಾರರಿಂದ ಮಾಹಿತಿ ಹಾಗೂ ದಾಖಲಾತಿಗಳ ಸಂಗ್ರಹ ಮಾಡುವರು,
ಗ್ರಾಮ ಲೆಕ್ಕಾಧಿಕಾರಿಗಳು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಲ್ಲಿಸಬೇಕಾದ ದಾಖಲೆಗಳು,
ಕಡ್ಡಾಯವಾಗಿ ಆಧಾರ್ ಕಾರ್ಡ್, ಬ್ಯಾಂಕ್/ಅಂಚೆ ಖಾತೆ ವಿವರದ ಪ್ರತಿ, ಈ ವಿಳಾಸ ಮತ್ತು ವಯಸ್ಸಿಗೆ ಸಂಬಂಧಿಸಿದ ದಾಖಲಾತಿ, ಪಡಿತರ ಚೀಟಿ, ಚುನಾವಣೆ ಗುರುತಿನ ಚೀಟಿ ಅಥವಾ ಸರ್ಕಾರ ವಿತರಿಸಿದ ಯಾವುದೇ ಗುರುತಿನ ಚೀಟಿ ನಂತರ ಮೊಬೈಲ್ ಆಪ್ ಮೂಲಕ ಭಾವಚಿತ್ರ ಸೆರೆಹಿಡಿಯಲಾಗುವುದು.
ಅರ್ಹರಿಗೆ 12 ಗಂಟೆಯೊಳಗೆ ನಾಡ ಕಚೇರಿ ಉಪತಹಸೀಲ್ದಾರರಿಂದ ಪಿಂಚಣಿ ಮಂಜೂರಾತಿ ಅನುಮೋದನೆ ನೀಡಲಾಗುವುದು, ನಂತರ ಫಲಾನುಭವಿಗಳ ಮನೆಬಾಗಿಲೆಗೆ ಪಿಂಚಣಿ ಮಂಜೂರಾತು ಆದೇಶ ವಿತರಣೆ ಮಾಡಲಾಗುವುದು ಎಂದಿದ್ದಾರೆ.
ಈದೇ ಸಂಧರ್ಭದಲ್ಲಿ ಶಿರಸ್ತೆದಾರ್ ಸದಾಶಿವ, ಸಿಬ್ಬಂದಿ ಕಾಂತರಾಜ್, ಗೊಂವಿದ್ ನಾಯ್ಕ್, ಇತರರು ಇದ್ದರು.