ಚಳ್ಳಕೆರೆ ನ್ಯೂಸ್ :
ಆದ್ದರಿಂದ
ಉಚಿತವಾದ
ಆರೋಗ್ಯ ತಪಾಸಣೆ ಶಿಬಿರ ಪ್ರತಿಯೊಬ್ಬರಿಗೂ
ಅನುಕೂಲವಾಗಬೇಕು
ದೇಹದಲ್ಲಿ ಮುಖ್ಯವಾದ ಅಂಗ ಎಂದರೆ ಕಣ್ಣು ಇಂತಹ ಅಂಗವನ್ನು
ಸುರಕ್ಷತವಾಗಿ ಇಟ್ಟುಕೊಳ್ಳುವುದು ನಮ್ಮೆಲ್ಲರ ಕರ್ತವ್ಯವಾಗಿದೆ
ಎಂದು ನರಹರಿ ಪ್ರತಿಷ್ಠಾನದ ಡಾ. ರಾಜಾರಾಂ ಸ್ವಾಮೀಜಿ
ಅಭಿಮತ ವ್ಯಕ್ತಪಡಿಸಿದರು.
ನರಹರಿ ನಗರದಲ್ಲಿ ನಡೆದ ನೇತ್ರ
ತಪಾಸಣೆ ಶಿಬಿರ ಕಾರ್ಯಕ್ರಮದಲ್ಲಿ ಮಾತನಾಡಿ,
ಇಂದಿನ ಸಮಾಜ
ಅಭಿವೃದ್ಧಿಯತ್ತಾ ಸಾಗುತ್ತಿದೆ, ಇಂತಹ ಸಮಯದಲ್ಲಿ ಆರೋಗ್ಯ
ಶಿಬಿರಗಳು ಪ್ರತಿಯೊಬ್ಬರಿಗೂ ದೊರಕುವಂತಾಗಬೇಕು ಮುಂದಿನ
ದಿನಗಳಲ್ಲಿ ಇಂತಹ ಶಿಬಿರಗಳನ್ನ ನಡೆಸಲಾಗುವುದು ಎಂದರು.
ಇದೇ ಸಂಧರ್ಭದಲ್ಲಿ ಬಿಸಿ.ಸಂಜೀವಮೂರ್ತಿ, ಕಣ್ಣಿನ ಡಾ.ವಿಜಯ್ ಕುಮಾರ್ ಹಾಗೂ ಇತರರು ಇದ್ದರು