ಚಳ್ಳಕೆರೆ ನ್ಯೂಸ್ :
ಚಳ್ಳಕೆರೆ ತಾಲೂಕಿನ ಗೋಪನಹಳ್ಳಿ ಗ್ರಾಮದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಸಾಂಕ್ರಾಮಿಕ ಖಾಯಿಲೆ ಹಬ್ಬಿದೆ ಎಂಬ ಮಾಹಿತಿ ಮೇರೆಗೆ ಬೇಟಿ ನೀಡಿದ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಇಒ ಲಕ್ಷ್ಮಣ್ ಸಾರ್ವಜನಿಕರೊಟ್ಟಿಗೆ ಮಾಹಿತಿ ಪಡೆದರು.
ಸಾಂಕ್ರಾಮಿಕ ಖಾಯಿಲೆಯ
ಪ್ರಕರಣಗಳು ಕಂಡು ಬಂದ ಹಿನ್ನೆಯಲ್ಲಿ ಗ್ರಾಮಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದರು.
ಗ್ರಾಮದಲ್ಲಿ ಕುಡಿಯುವ ನೀರಿನ ಪೈಪ್ ಗಳನ್ನು ಸರಿಪಡಿಸಬೇಕು ಒಡೆದ ಪೈಪ್ ಸಂಪರ್ಕ ಕಡಿತಗೊಳಿಸಬೇಕು
ಕೂಡಲೆ ಗ್ರಾಮದಲ್ಲಿ ಸ್ಷಚ್ಚತೆ, ಶುದ್ದ ಕುಡಿಯುವ ನೀರು ಸರಬರಾಜು ಮಾಡ ಬೇಕು ತಾತ್ಕಲಿಕವಾಗಿ ಸಾರ್ವಜನಿಕರಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡುವಂತೆ ಪಿಡಿಒಗೆ ಸೂಚನೆ ನೀಡಿದರು.
ಕುಡಿಯುವ ನೀರು ಸರಬರಾಜ್ ಎ ಇ ಇ ದಯಾನಂದ ಮಾತನಾಡಿ ಗ್ರಾಮದಲ್ಲಿ 8 ಕೊಳವೆ ಬಾವಿಗಳಿದ್ದು ಅವುಗಳಲ್ಲಿ ಮೂರು ಮಾತ್ರ ಯೋಗ್ಯವಾಗಿ ಉಳಿದ ಐದು ಕೊಳವೆ ಬಾವಿಗಳ ನೀರು ಬಳಕೆಗೆ ಯೋಗ್ಯವಲ್ಲ ವಾಗಿವೆ.
ಶುದ್ದ ಕುಡಿಯುವ ನೀರಿನ ಘಟಕಗಳಿಗೆ ಸಂಪರ್ಕ ಕೊಡುವ ಪೈಪ್ ಲೈನ್ ಒಡೆದಿದ್ದು ಬದಲಾಯಿಸಿ ಶುದ್ದ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿ ಪಡಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮೇಲ್ವೀಚಾರಕ ಗಂಗಾಧರಪ್ಪ ಮಾತನಾಡಿ ಗ್ರಾಮದಲ್ಲಿ ಕಾಲರ ರೋಗವಿಲ್ಲ ಜನರು ಆತಂಕಪಡುವುದು ಬೇಡ
ಚರಂಡಿಗಳು ಕಟ್ಟಿಕೊಂಡು ಕಲುಷಿತ ವಾತಾವರದಿಂದ ಜನರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರಿದೆ.
ಈಗಲಾದರೂ ನಿಮ್ಮ ಮನೆ ಸುತ್ತ ಮುತ್ತ ಹಾಗೂ ಚರಂಡಿಗಳ ಸ್ವಚ್ಚತೆ ಕಾಪಡುವಂತೆ ತಿಳಿಸಿದರು.
ಈ ಸಂದರ್ಭದಲ್ಲಿ ತಾಪಂ ಸಹಾಯಕ ನಿರ್ದೇಶಕ ಸಂಪತ್ತು. ಸಂತೋಷ್, ಡಾ.ಬಿಂದ್ರುಶ್ರೀ. ಎಇ ಇ ಕಾವ್ಯ.ಜೆ ಇ ತಿಪ್ಪೇಸ್ವಾಮಿ.ಪಿಡಿಒ ವೆಂಕಟೇಶ್. ಆಶಾ ಕಾರ್ಯಕರ್ತೆಯರು ಹಾಗೂ ಗ್ರಾಪಂ ಸದಸ್ಯರು ಉಪಸ್ಥಿತ ರಿದ್ದರು.