ಚಳ್ಳಕೆರೆ ನ್ಯೂಸ್ :
ಸಚಿವ ನಾಗೇಂದ್ರ ವಿರುದ್ಧ ಪ್ರತಿಭಟನೆಗಿಳಿದ ಬಿಜೆಪಿ
ಎಸ್ಟಿ ಅಭಿವೃದ್ಧಿ ನಿಗಮದಲ್ಲಿ ನಡೆದಿರುವ ಭ್ರಷ್ಟಾಚಾರ ವಿರೋಧಿಸಿ
ಸಚಿವ ಬಿ. ನಾಗೇಂದ್ರ ರಾಜೀನಾಮೆ ಪಡೆಯುವಂತೆ ಒತ್ತಾಯಿಸಿ
ಮೊಳಕಾಲ್ಕೂರಿನಲ್ಲಿ ಬಿಜೆಪಿ ನೂರಾರು ಕಾರ್ಯಕರ್ತರು
ಮುಖಂಡರು ಬೀದಿಗಿಳಿದು ಪ್ರತಿಭಟನೆ ನಡೆಸಿದರು.
ನಗರದ
ಮುಖ್ಯ ರಸ್ತೆಯಿಂದ ಹೊರಟ ಪ್ರತಿಭಟನಾ ರ್ಯಾಲಿಯು,
ತಹಶೀಲ್ದಾರ್ ಕಚೇರಿ ಮುಂಭಾಗ ನಾಗೇಂದ್ರ ಭಾವಚಿತ್ರ ಹಿಡಿದು
ಕುಳಿತು ಪ್ರತಿಭಟನೆ ನಡೆಸಿದರು.
ಸರ್ಕಾರದ ವಿರುದ್ಧ ಘೋಷಣೆ
ಹಾಕಿದರು.
ಇನ್ನೂ
ಮೊಳಕಾಲ್ಕೂರು ತಾಲ್ಲೂಕು ಮಂಡಲ ಅಧ್ಯಕ್ಷ ಡಾ. ಪಿ.
ಮಂಜುನಾಥ್ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಶೋಷಿತ
ಸಮುದಾಯಗಳ ಪರವಾದ ಸರ್ಕಾರ ಅಂತ ಹೇಳುತ್ತಾರೆ.
ಆದರೆ
ಅವರ ಕಲ್ಯಾಣಕ್ಕಾಗಿ ಇಟ್ಟಂತಹ ಹಣವನ್ನು ಏಕೆ ದುರುಪಯೋಗ
ಪಡಿಸಿಕೊಂಡಿದ್ದೀರಿ.
ವಾಲ್ಮೀಕಿ ಸಮುದಾಯಕ್ಕೆ ಇಟ್ಟಂತ ಹಣವನ್ನು
ತೆಲಂಗಾಣ ಆಂಧ್ರಪ್ರದೇಶಕ್ಕೆ ಕಳಿಸಿದ್ದೀರಿ..?
ಕಣ್ಣು ಹೊರೆಸುವ
ಸಲುವಾಗಿ ಎಸ್‌ಐಟಿ ತಂಡ ರಚನೆ ಮಾಡಿ ಎಂ. ಡಿ ಅರೆಸ್ಟ
ಮಾಡುವ ಪ್ರಯತ್ನ ಮಾಡುತ್ತಿದ್ದೀರಿ.
ಸಿದ್ದರಾಮಯ್ಯರವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಿ
ಎಂದರು.