ಚಳ್ಳಕೆರೆ : ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಮತದಾನ ಇಂದು ಜರುಗಿತು, ಮತದಾರರಲ್ಲಿ ಕಾಂಗ್ರೆಸ್, ಬಿಜೆಪಿ, ಹಾಗೂ ಪಕ್ಷೇತರ ಅಭ್ಯರ್ಥಿಗಳ ಪರ ಜನಪ್ರತಿನಿಧಿಗಳು ಭರ್ಜರಿಯಾಗಿ ಮತಯಾಚನೆ ಮಾಡಿದರು.
ಅದರಂತೆ ಆಗ್ನೇಯ ಶಿಕ್ಷಕರ ಚಳ್ಳಕೆರೆ ಕ್ಷೇತ್ರದಲ್ಲಿ ಸುಮಾರು 1019 ಮತದಾರರಲ್ಲಿ ಇಂದು ಸುಮಾರು 963 ಮತಗಳು ಮತದಾನವಾಗಿವೆ, ಅದರಲ್ಲಿ ಗಂಡು 710 ಹಾಗೂ ಹೆಣ್ಣು 253 ಮತಗಳು ಸ್ವೀಕೃತವಾಗಿವೆ ಎಂದು ತಹಶೀಲ್ದಾರ್ ರೇಹಾನ್ ಪಾಷ ಮಾಹಿತಿ ನೀಡಿದ್ದಾರೆ.

ಇನ್ನೂ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಯಾದ ಡಿಟಿ.ಶ್ರೀನಿವಾಸ್ ರವರ ಪರವಾಗಿ ಮತಯಾಚನೆ ಮಾಡಿದ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರು ಹಾಗೂ ಕರ್ನಾಟಕ ರಾಜ್ಯ ಸಣ್ಣ ಕೈಗಾರಿಕೆಗಳ ಅಭಿವೃದ್ಧಿ ನಿಗಮದ ಅಧ್ಯಕ್ಷ ಟಿ.ರಘುಮೂರ್ತಿ ಹಾಗೂ ಮಾಜಿ ಸಂಸದ ಬಿಎನ್.ಚಂದ್ರಪ್ಪ ಮತದಾರರಲ್ಲಿ ಮನವಿ ಮಾಡುತ್ತ ಕಾಂಗ್ರೇಸ್‌ಗೆ ಗೆಲುವು ನಿಶ್ಚಿತ ಎಂದು ಹೇಳಿದರು.
ಶಾಸಕ ಟಿ.ರಘುಮೂರ್ತಿ ಮಾತನಾಡಿ, ಚಳ್ಳಕೆರೆ ಕ್ಷೇತ್ರದಲ್ಲಿ ಸು.1019 ಮತದಾರರು ಇದ್ದಾರೆ, ಶಿಕ್ಷಕರ ಪರ ಧ್ವನಿಯಾಗಿ ನಿಲ್ಲುವ ಹಾಗು ಅವರ ಬಗ್ಗೆ ಕಾಳಜಿ ಇರುವ ಅಭ್ಯರ್ಥಿ ಡಿಟಿ.ಶ್ರೀನಿವಾಸ್ ರವರು, ಈಗಾಗಲೇ ಚುನಾವಣೆ ಪ್ರಣಾಳಿಕೆಯಲ್ಲಿ ಓಪಿಎಸ್ ಜಾರಿಗೊಳಿಸುತ್ತೆವೆ ಎಂಬುವು ನಮ್ಮ ಮೊದಲ ಅಜೆಂಡ, ಇನ್ನೂ ಶಿಕ್ಷಣ ಕ್ಷೇತ್ರದಲ್ಲಿ ಅಪಾರವಾದ ಸೇವೆ ಇವರಾದಾಗಿದೆ ಇವರು ಗೆಲ್ಲುವುದು ಖಚಿತ. ಅದರಂತೆ ಜೂ.4ರಂದು ಹೊರ ಬಿಳುವ ಫಲಿತಾಂಶ ಚಿತ್ರದುರ್ಗದಲ್ಲಿ ಕಾಂಗ್ರೇಸ್ ಗೆಲುವು ನಿಶ್ಚಿತ ಆದ್ದರಿಂದ ಈಗಾಗಲೇ ನಾವು ಬಿಎನ್.ಚಂದ್ರಪ್ಪಗೆ ಅಭಿನಂದನೆಗಳು ಸಲ್ಲಿಸುತ್ತೆನೆ ಎಂದರು.

ಮಾಜಿ ಸಂಸದ ಬಿಎನ್.ಚಂದ್ರಪ್ಪ ಮಾತನಾಡಿ, ಈ ಬಾರಿಯ ವಿಧಾನ ಪರಿಷತ್ ಚುನಾವಣೆ ಅತ್ಯಂತ ಪರಿಣಾಮಕಾರಿಯಾಗಿ ನಡೆದಿದೆ, ಅದರಂತೆ ಆಡಳಿತ ರೂಢ ನಮ್ಮ ಕಾಂಗ್ರೇಸ್ ಪಕ್ಷದ ವರಿಷ್ಠರ ಸೂಚನೆಯಂತೆ ಈ ಬಾರಿ ನಮಗೆ ಗೆಲುವು ನಿಶ್ಚಿತ, ಇನ್ನೂ ಹೊಲದಲ್ಲಿ ಬೆಳೆ ಬರಲು ಉಳುಮೆ ಮಾಡಿ ಗೊಬ್ಬರ ಹಾಕಿದ ನಾವು ನಮ್ಮ ಕಾರ್ಯಕರ್ತರ ಶ್ರಮದಿಂದ ನಮಗೆ ಗೆಲುವು ಲಭಿಸುತ್ತದೆ, ಅದರಂತೆ ಜಿಲ್ಲೆಯ ಎಲ್ಲಾ ಶಾಸಕರು ಕಾರ್ಯಕರ್ತರು ಮುಖಂಡರ ಶ್ರಮದ ಫಲ ನನ್ನ ಗೆಲುವಿಗಾಗಿ ಕಾಯುವೆ ಎಂದಿದ್ದಾರೆ.
ಇನ್ನೂ ಬಿಜೆಪಿ ಅಭ್ಯರ್ಥಿ ವೈ.ಎ.ನಾರಯಾಣಸ್ವಾಮಿ ಮಾತನಾಡಿ, ಶಿಕ್ಷಣ ಕ್ಷೇತ್ರವನ್ನು ಕಾಂಗ್ರೇಸ್ ಸರಕಾರ ಬಂದ ಮೇಲೆ ಕೆಡಿಸಿಬಿಟ್ಟಿದ್ದಾರೆ, ಶಿಕ್ಷಣ ತಜ್ಞ, ಭಾಷಾ ಪ್ರವೀಣಾ, ನಿಗಂಟ ತಜ್ಞ ಮೆದಾವಿ ಶಿಕ್ಷಣ ಸಚಿವ ಮಧುಬಂಗರಾಪ್ಪ ಬಂದ ಮೇಲೆ ಶಿಕ್ಷಣ ಇಲಾಖೆ ಅದೋಗತಿಗೆ ಬಂದು ಬಿಟ್ಟಿದೆ. ಶಿಕ್ಷಕರು, ಉಪನ್ಯಾಸಕರು ಎಂದರೆ ಅವರ ಮನೆ ಕೂಲಿ ಕೆಲಸದವರು ಅಲ್ಲ, ಸಮಾಜ ಕಟ್ಟುವರು ಎಂದು ವಾಗ್ದಾಳಿ ನಡೆಸಿದರು. ಇನ್ನೂ ನಾಲ್ಕನೇ ಬಾರಿಗೆ ಗೆಲುವು ಸಾಧಿಸುವೆ ಶಿಕ್ಷಕರ ಸಮಸ್ಯೆಗೆ ಪರಿಹಾರ ನೀಡುವೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ್ ಅಧ್ಯಕ್ಷರಾದ ರವಿಕುಮಾರ್, ಶಶಿಕಲಾ ಸುರೇಶ್‌ಬಾಬು, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಪ್ಪ, ಶಶಿಧರ, ಕುಶಲ ಕರ್ಮಿಗಳ ವಿಭಾಗದ ರಾಜ್ಯಾಧ್ಯಕ್ಷರಾದ ಆರ್.ಪ್ರಸನ್ನಕುಮಾರ್, ಹಿರಿಯ ಮುಖಂಡರಾದ ಟಿ.ಎ.ಟಿ.ಪ್ರಭುದೇವ್, ಸಿ.ಬಾಬು, ಮಾಜಿ ತಾಲ್ಲೂಕು ಪಂಚಾಯತ್ ಸದಸ್ಯರಾದ ಆಂಜನೇಯ, ಗಿರಿಯಪ್ಪ, ಮುಖಂಡರುಗಳಾದ ರುದ್ರಮುನಿ, ವೀರೇಶ್, ಮೈಲಾರಪ್ಪ, ಮಂಜುನಾಥ್, ಶಿವಸ್ವಾಮಿ, ಮೂಡಲಾಗಿರಿಯಪ್ಪ, ವೀರೇಶ್, ಮುಖಂಡರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಮತ್ತು ಶಿಕ್ಷಕ ಮತದಾರರು ಉಪಸ್ಥಿತರಿದ್ದರು.

ಹಾಗೂ ಬಿಜೆಪಿ ಮಂಡಲ ಅಧ್ಯಕ್ಷ ಸೂರನಹಳ್ಳಿ ಶ್ರೀನಿವಾಸ್, ಬಾಳೆಕಾಯಿ ರಾಮದಾಸ್, ಶಿವಪುತ್ರಪ್ಪ, ಮಂಜುನಾಥ್, ಮಹಿಳಾ ಕಾರ್ಯಕರ್ತೆಯರು, ಇತರರು ಪಾಲ್ಗೋಂಡಿದ್ದರು.

Namma Challakere Local News
error: Content is protected !!