ಚಳ್ಳಕೆರೆ : ತಂಬಾಕು ಮಾರಾಟ ಮಾಡಿದರೆ ದಂಡ ಬಿಳುತ್ತದೆ ಶಾಲಾ ಕಾಲೇಜುಗಳಿಂದ, ನೂರು ಮೀಟರ್ ದೂರ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡಬಾರದೆಂದು ಕಟ್ಟು ನಿಟ್ಟಿನ ಆದೇಶ ಪಾಲೀಸಬೇಕು ಎಂದು ಎಲ್ಲಾ ಅಂಗಡಿಗಳಿಗೆ ಜಿಲ್ಲಾ ತಂಬಾಕು ನಿಯಂತ್ರಣ ತಂಡದ ಹಾಗೂ ತಾಲೂಕು ಆರೋಗ್ಯ ಅಧಿಕಾರಿ ಕುದಾಪುರ ತಿಪ್ಪೆಸ್ವಾಮಿ ಹೇಳಿದ್ದಾರೆ.
ನಗರದ ಹಲವು ಕಿರಾಣಿ ಅಂಗಡಿಗಳಿಗೆ ಜಿಲ್ಲಾ ತಂಬಾಕು ನಿಯಂತ್ರಣ ಅಧಿಕಾರಿಗಳ ತಂಡ ಬೇಟಿ ನೀಡಿ ಅಂಗಡಿಗಳಲ್ಲಿ ತನಿಖೆ ನಡೆಸಿದ್ದಾರೆ.
ಸಾರ್ವಜನಿಕರ ಸ್ಥಳಗಳಲ್ಲಿ ಹಾಗೂ ಸರಕಾರಿ ಶಾಲೆಯ ಸುತ್ತಲು ನೂರು ಮೀಟರ್ ವ್ಯಾಪ್ತಿಯಲ್ಲಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಸಾರ್ವಜನಿಕರ ದೂರಿನ ಮೇರೆಗೆ ಪರೀಶಿಲನೆ ಮಾಡಿದ್ದಿವೆ ಸುಮಾರು ಅಂಗಡಿಗಳಲ್ಲಿ ತಂಬಾಕು ಉತ್ಪನ್ನಗಳ ಮಾರಾಟ ಮಾಡುವುದು ಕಂಡು ಬಂದಿದೆ ಆದ್ದರಿಂದ ಧಂಡ ವಿಧಿಸಿ ಷರತ್ತು ವಿಧಿಸಲಾಗಿದೆ ಎಂದರು.
ಆರೋಗ್ಯ ನಿರೀಕ್ಷಕ ರಾಜು. ಮಾತನಾಡಿ, ಮಕ್ಕಳ ಮೇಲೆ ತಂಬಾಕು ಉತ್ಪನ್ನಗಳು ಮಾರಾಟ ವಿಪರೀತ ಪರಿಣಾಮ ಬೀರುತ್ತದೆ ಆದ್ದರಿಂದ ಶಾಲಾ ಕಾಲೇಜುಗಳಿಂದ ಸುಮಾರು ನೂರು ಮೀಟರ್ ದೂರದವರೆಗೆ ನಿಷೇಧಿಸಲಾಗಿದೆ ಆದ್ದರಿಂದ ಅಂಗಡಿಗಳನ್ನು ಪರೀಶಿಲನೆ ಮಾಡಿದ್ದೆವೆ ಎಂದರು.
ಈದೇ ಸಂಧರ್ಭದಲ್ಲಿ ಸಮಾಜ ಸೇವಕ ತಿಪ್ಪೇಸ್ವಾಮಿ. ಪೊಲೀಸ್ ಕಾನ್‌ಸ್ಟೆಬಲ್ ಮಂಜು, ಕಚೇರಿ ಸಿಬ್ಬಂದಿ ವೆಂಕಟೇಶ್, ನಗರಸಭೆ ದಾದಪೀರ್ ತಂಡದಲ್ಲಿ ಇದ್ದರು.