ಚಳ್ಳಕೆರೆ ನ್ಯೂಸ್ :

ಈಡೀ ರಾಜ್ಯಾದ್ಯಂತ ಶಾಲಾ ಕಾಲೇಜು ಪ್ರಾರಂಭಕ್ಕೆ ಕ್ಷಣಗಣನೆ

ಶಾಲಾ ಪ್ರಾರಂಭೋತ್ಸವಕ್ಕೆ ಈಡೀ ಶಾಲೆಯನ್ನು ಸುಣ್ಣ ಬಣ್ಣ ಗಳಿಂದ ಬಳೆದು ಹೊಸ ಸೊಬಗು‌ ನೀಡಿ‌ ತಳಿರು‌ತೋರಣಗಳಿಂದ ಕಂಗೊಳಿಸುವಂತೆ ಮಾಡಿದ್ದಾರೆ.

ಆದರೆ ಚಳ್ಳಕೆರೆ ತಾಲೂಕಿನ ಜುಂಜರಗುಂಟೆ ಗ್ರಾಮದ ಶಾಲೆಯೇ ಬೇರೆ ಹೌದು ಉತ್ತಮವಾದ ಶಾಲಾ ಪರಿಸರ ಹಾಗೂ ಶಿಕ್ಷಕರ ಕಾಳಜಿಯಿಂದ ಭರದ ಸಿದ್ದತೆ‌ ನಡೆಯುತ್ತಿದೆ.

ಆದರೆ ಶಾಲಾ ಮುಂಬಾಗ ಅಂದರೆ ಗ್ರಾಮದ ಪ್ರಮುಖ ರಸ್ತೆ ಇಕ್ಕೆಲಗಳಲ್ಲಿ ಕೊಳಚೆ ನೀರು‌ ನಿಂತು‌ ಶಾಲೆಯ‌ಅಂದವನ್ನು ಕೆಡಿಸುತ್ತದೆ.

ಆದರೆ ಶಾಲಾ ಆವರಣದಲ್ಲಿ ಸ್ವಚ್ಚತೆ ಶುಚಿತ್ವವನ್ನು ಕಾಪಾಡಿಕೊಂಡು ಶಾಲಾ ಸಿದ್ದತೆ ಸಜ್ಜಾಗಿದ್ದಾರೆ.

ಆದರೆ ರಸ್ತೆ ಮುಂಬಾಗದಲ್ಲಿ ಗ್ರಾಮ ಪಂಚಾಯತಿ ಸ್ವಚ್ಚತೆ ಮಾಡಿಸಬೇಕಿತ್ತು ಆದರೆ ಮೌನ ವಹಿಸಿದ್ದರಿಂದ ಶಾಲೆಗೆ ಅಪಕಿರ್ತಿ ತರುವಂತಾಗಿದೆ.

ಇನ್ನೂ ಶಾಲೆಗೆ ದಿನ‌ ನಿತ್ಯ ನೂರಾರು ಮಕ್ಕಳು ಆಗಮಿಸುವ ಈದೇ ಕೊಳಚೆ ನೀರು ಸಮೀಪ, ಇನ್ನೂ ಸ್ವಚ್ಚತೆ ಇಲ್ಲದೆ ಸೊಳ್ಳೆಗಳ ತಾಣವಾಗಿದೆ.

ಇನ್ನೂ ಶಾಲೆ ಮುಂಬಾಗ ಕೊಳಚೆ ನೀರು ಸ್ವಚ್ಚತೆಗೆ ಗ್ರಾಮ ಪಂಚಾಯತಿ ಅಧಿಕಾರಿಗಳು ಮುಂದಾಗುವರಾ ಕಾದು ನೋಡಬೇಕಿದೆ.

About The Author

Namma Challakere Local News
error: Content is protected !!