ಚಳ್ಳಕೆರೆ : ರೈತನ ಕಣ್ಣೆದುರೆ ಇದ್ದಕ್ಕಿದ ಹಾಗೆ ಸುಮಾರು ೧೧ ಕುರಿಗಳು ಸಾವನ್ನಪ್ಪಿರುವ ಘಟನೆ
ಚಳ್ಳಕೆರೆ ತಾಲೂಕಿನ ಹಿರೆಹಳ್ಳಿ ಗ್ರಾಪಂ ವ್ಯಾಪ್ತಿಯ ಪಾಲನಾಯಕನಕೋಟೆ ಗ್ರಾಮದಲ್ಲಿ ನಡೆದಿದೆ.
ಕುರಿಸಾಕಾಣಿಕೆ ರೈತ ತಿಪ್ಪೇಸ್ವಾಮಿ ಕುರಿಗಳನ್ನು ಎಂದಿನತೆ ಮೇಹಿಸಿಕೊಂಡು ಇನ್ನೇನು ಕುರಿಹಟ್ಟಿಗೆ ಹೋಗಬೇಕು ಎನ್ನುವಷ್ಟರಲ್ಲಿ ಸಾವನ್ನಪಿವೆ.
ಈ ದೃಶ್ಯವನ್ನು ಕಂಡ ಕುರಿಗಾಯಿ ರೈತ ಕಂಗಲಾಗಿದ್ದಾನೆ
ಇನ್ನೂ ಕಾರಣ ಹುಡುಕುತ್ತಾ ಹೊರಟರೆ ಹೊಲದಲ್ಲಿ ಹೈಬ್ರಿಡ್ ಜೋಳದ ಚಿಗುರು ತಿಂದು ಸಾವನ್ನಪ್ಪಿವೆ ಎಂದು ಸಂಶಯ ವ್ಯಕ್ತಪಡಿಸಿದ್ದಾರೆ.
ಸುಮಾರು ೧೧ ಕುರಿಗಳಿಗೆ ಸುಮಾರು ಒಂದು ಲಕ್ಷ ರೂ ನಷ್ಟ ಹಾಗಿರಬಹುದು ಎಂದು ಅಂದಾಜಿಸಲಾಗಿದೆ ಆದರೆ ಮೊದಲೆ ಸಂಕಷ್ಟದಲ್ಲಿದ್ದ ರೈತನಿಗೆ ಬರ ಸಿಡಿಲು ಬಡಿದಂತಾಗಿದೆ.
ಘಟನೆ ವಿವಾರ ತಿಳಿದ ತಾಲೂಕು ಪಶುಸಂಗೋಪನೆ ಸಹಾಯಕ ವೈದ್ಯಾಧಿಕಾರಿ ಡಾ.ರೇವಣ್ಣ ಸ್ಥಳಕ್ಕೆ ಪಶುವೈದ್ಯಾಧಿಕಾರಿಗಳನ್ನು ಕಳಿಸಿ ಸತ್ತ ಕುರಿಗಳ ಶವಪರಿಕ್ಷೆ ನಡೆಸಿ ಸರಕಾರದಿಂದ ಬರುವ ಪರಿಹಾರ ದೊರಕಿಸಲಾಗುವುದು ಎಂದು ತಿಳಿಸಿದ್ದಾರೆ.