ಚಳ್ಳಕೆರೆ ನ್ಯೂಸ್ :
ಹೌದು ಇಂತಹವೊಂದು ಅಪಘಾತ ವಲಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮಕ್ಕೆ ಬರುವ ರಸ್ತೆ ಮಾರ್ಗದಲ್ಲಿ ಕಾಣಬಹುದಾಗಿದೆ.
ಇತಿಹಾಸ ಪ್ರಸಿದ್ಧಿ ಪಡೆದ ಶ್ರೀ ಗೌರಸಮುದ್ರ ಮಾರಮ್ಮ ದೇವಿ ದರ್ಶನಕ್ಕೆ ಪ್ರತಿ ವಾರವೂ ರಾಜ್ಯವಲ್ಲದೆ ಆಂಧ್ರಪ್ರದೇಶದಿಂದ ಭಕ್ತಾಧಿಗಳು ಆಗಮಿಸುತ್ತಾರೆ
ಆದರೆ ಇದೇ ಮಾರ್ಗವಾಗಿ ಮೊಳಕಾಲ್ಮೂರು ತಾಲೂಕು ಕೇಂದ್ರಕ್ಕೂ ಹೋಗುಬೇಕು ಇಂತಹ ಮಾರ್ಗ ಗ್ರಾಮದ ಸಮೀಪದಲ್ಲೇ ಇದ್ದು, ದೊಡ್ಡ ಪಾಳು ಬಿದ್ದ ಬಾವಿಯೊಂದು ರಸ್ತೆ ಪಕ್ಕದಲ್ಲಿ ಇರುವುದು ಹಾಗೂ ರಸ್ತೆ ತಿರುವು ಕೂಡ ಈದೇ,
ಬಾವಿ ಸಮೀಪ ಇರುವುದು ಅಪಾಯಕ್ಕೆ ಅಹ್ವಾನ ಮಾಡಿದಂತೆ ಇದೆ.
ಇನ್ನೂ ಬಾವಿಯ
ಅರ್ಧಭಾಗವು ಸಂಪೂರ್ಣವಾಗಿ ಕೆಳಭಾಗಕ್ಕೆ ಜಾರಿದ್ದು ರಸ್ತೆಯ ಮೇಲೆ ಓಡಾಡುವ ವಾಹನ ಸವಾರರಿಗೆ ಯಾವುದೇ ಸೂಚನೆ ಇಲ್ಲದೆ ತಿರುವಿನಲ್ಲಿ ಅಪಾಯಕ್ಕೆ ತುತ್ತಾಗುವ ಸಂಭವವಿದೆ.
ಇನ್ನೂ ಈ ಸಮಸ್ಯೆ ಪ್ರತಿ ಬಾರಿ ಮಳೆ ಬಂದ ಸಂಧರ್ಭದಲ್ಲಿ ತಲೆ ದೋರುತ್ತಿದೆ ಆದರೆ ಅಧಿಕಾರಿಗಳು ಮಾತ್ರ ನೆಪ ಮಾತ್ರಕ್ಕೆ ಸೂಚನಾ ಫಲಕಗಳನ್ನು ಹಾಕಿ ಕೈ ತೊಳೆದುಕೊಳ್ಳುತ್ತಾರೆ,
ಇನ್ನೂ ಪಂಚಾಯತ ರಾಜ್ ಇಂಜಿನಿಯರಿಂಗ್ ಇಲಾಖೆ, ಲೋಕಪಯೋಗಿ ಇಲಾಖೆ ಹಾಗೂ ಗ್ರಾಮ ಪಂಚಾಯತಿ ಅಧಿಕಾರಿಗಳಿಗೆ ಮೌಖಿಕವಾಗಿ ತಿಳಿಸಿದರು, ಈ ರಸ್ತೆ ಮಾತ್ರ ದರುಸ್ತಿಯಿಂದ ವಂಚಿತವಾಗಿದೆ.
ಯಾವ ಇಲಾಖೆಗೆ ಒಳಪಡುತ್ತದೆ ಎಂಬುದು ಸಾರ್ವಜನಿಕರಿಗೆ ಗೋಚರಿಸದಾಗಿದೆ. ಈ ರಸ್ತೆ ಹಲವು ಗ್ರಾಮಗಳು ಹಾಗೂ ಮೊಳಕಾಲ್ಮೂರು ತಾಲೂಕು ಕೇಂದ್ರಕ್ಕೆ ತೆರಳಬೇಕೆಂದರೆ ಈ ರಸ್ತೆ ಅಂಲಂಬಿಸಬೇಕಿದೆ.
ಇನ್ನೂ ಸ್ಥಳೀಯ ಗ್ರಾಮ ಪಂಚಾಯತಿ ಅಧಿಕಾರಿಗಳು ಕೂಡ ದಿವ್ಯನಿರ್ಲಕ್ಷ್ಯವಹಿಸಿರುವುದು ಮೇಲ್ನೋಟಕ್ಕೆ ಕಂಡು ಬರುತ್ತಿದೆ, ಆದರೆ ಈ ಪಾಳು ಬಿದ್ದ ಬಾವಿಗೆ ಹಾಗೂ ರಸ್ತೆ ಸುರಕ್ಷತೆಗೆ ಶಾಶ್ವತವಾಗಿ ತಡೆ ಗೋಡೆ ಹಾಗೂ ಸೂಚನಾ ಫಲಕಗಳನ್ನು ಅಳವಡಿಸುವ ಮೂಲಕ ವಾಹನ ಸವಾರರ ಪ್ರಾಣ ಉಳಿಸಬೇಕು ಎಂದು ಸಾರ್ವಜನಿಕರು ಮನವಿ ಮಾಡಿದ್ದಾರೆ.