ಚಳ್ಳಕೆರೆ ನ್ಯೂಸ್ :
ಶುದ್ಧ ಕುಡಿಯುವ ನೀರಿಗಾಗಿ ಕೊಡಹಿಡಿದು ಅಲೆಯುವ ಪರಿಸ್ಥಿತಿ ಬಂದೋದಗಿದೆ.
ಹೌದು ಚಳ್ಳಕೆರೆ ತಾಲೂಕಿನ ನನ್ನಿವಾಳ ಗ್ರಾಮದ ದೊರೆಹಟ್ಟಿಗೆ ಹೋಗುವ ಮಾರ್ಗದ ಶ್ರೀ ಪಾಪನಾಯಕ ಗ್ರಾಮಾಂತರ ಪ್ರೌಢಶಾಲೆ ಹತ್ತಿರ ಇರುವ ಶುದ್ಧ ಕುಡಿಯುವ ನೀರಿನ ಘಟಕ ಕಳೆದ ಮೂರು ವರ್ಷಗಳಿಂದ ಸ್ಥಗಿತವಾಗಿದೆ ಇಲ್ಲಿನ ಸಾರ್ವಜನಿಕರು ಕೊಡ ಹಿಡಿದು ಕುಡಿಯುವ ನೀರಿಗಾಗಿ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
ಇನ್ನೂ ಸಂಬಂಧಿತ ಗ್ರಾಮ ಪಂಚಾಯತ್ ಇಲಾಖೆ ಮಾತ್ರ ಯಾಕೋ ಮೌನ ವಹಿಸಿದಂತೆ ಇದೆ.
ಫ್ಲೋರೈಡ್ ಮುಕ್ತ ಕುಡಿಯುವ ನೀರು ಸರಬರಾಜಿಗೆ ಹಲವು ಬಾರಿ ಮನವಿ ಮಾಡಿದರು ಅಧಿಕಾರಿಗಳು ಕ್ಯಾರೆ ಎನ್ನುತ್ತಿಲ್ಲ ಎಂದು ಸ್ಥಳೀಯರ ಆರೋಪವಾಗಿದೆ.
ಇನ್ನೂ ಗ್ರಾಮದಲ್ಲಿ ಇರುವ ಮಿನಿ ಟ್ಯಾಂಕ್ ಗೆ ಸುತ್ತಮುತ್ತಲಿನ ಮನೆಯವರು ಪೈಪ್ ಅಳವಡಿಸಿದರೆ ಇನ್ನೂ ಉಳಿದವರ ಪಾಡೆನು ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದರು.
ಇಂತಹ ಪೈಪ್ ಹಾಕುವವರ ವಿರುದ್ಧ ಕ್ರಮ ಕೈಗೊಳ್ಳಬೇಕು ಸರ್ವರಿಗೂ ಸಮನಾಗಿ ಕುಡಿಯುವ ನೀರು ಸಿಗುವಂತಾಗಬೇಕು ಎಂಬುದು ಗ್ರಾಮಸ್ಥರ ಆಗ್ರಹವಾಗಿದೆ.
ಇನ್ನಾದರೂ ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳು ಸಂಬಂಧಿಸಿದ ಪಿಡಿಓಗಳಿಗೆ ಕುಡಿಯುವ ನೀರಿಗಾಗಿ ಹಾಹಕಾರ ಉಂಟಾಗಬಾರದು ಎಂದು ಕಟ್ಟುನಿಟ್ಟಿನ ಕ್ರಮವನ್ನು ಸೂಚಿಸವರಾ ಕಾದು ನೋಡಬೇಕಿದೆ.