ಚಳ್ಳಕೆರೆ ನ್ಯೂಸ್ :
ದಾರಿ ಮಧ್ಯೆ ಕೆಟ್ಟು ನಿಂತ ಸರ್ಕಾರಿ ಬಸ್ : ಪರದಾಡಿದ
ಪ್ರಯಾಣಿಕರು
ಚಿತ್ರದುರ್ಗದಿಂದ ಬೇಲೂರಿಗೆ ಹೊರಟಿದ್ದ ರಾಜ್ಯ ಸರ್ಕಾರಿ
ಬಸ್ಸೋಂದು ದಾರಿ ಮಧ್ಯದಲ್ಲಿ ಕೆಟ್ಟು ನಿಂತ ಘಟನೆ ಚಿತ್ರದುರ್ಗದಲ್ಲಿ
ನೆಡೆದಿದೆ.
ಚಿಕ್ಕಮಗಳೂರು ಡಿಪೋ ಬಸ್ ಚಿತ್ರದುರ್ಗದಿಂದ
ಮೂರು ಕಿಲೋಮೀಟರ್ ದೂರ ಚಲಿಸಿದ ಮೇಲೆ ಬಸ್ ಕೆಟ್ಟು
ನಿಂತಿದ್ದು, ರಸ್ತೆಯಲ್ಲಿಯೇ ಬಸ್ ಗಾದ ಸಮಸ್ಯೆ ಏನು ಎಂದು
ಪರಿಶೀಲಿಸಲಾಗಿದ್ದು,
ವಾಕ್ಯೂಮ್ ಸಮಸ್ಯೆಯಿಂದ ಬಸ್ ಮುಂದೆ
ಹೋಗಲು ಸಾಧ್ಯವಾಗದೆ ನಿಂತಿದ್ದು ಪತ್ತೆಯಾಗಿದೆ. ಇದರಿಂದ
ಪ್ರಯಾಣಿಕರನ್ನು ಬೇರೆ ಬಸ್ ಗೆ ಹತ್ತಿಸಿ ಕಳುಹಿಸಲಾಯಿತು.