[2:07 PM, 5/25/2024] ರಾಮುದೊಡ್ಮನೆ ಚಳ್ಳಕೆರೆ👍: ಸಮಾಜದ ಸಮಗ್ರ ಬೆಳವಣಿಗೆಗೆ ಶಿಕ್ಷಣ ವಲಯ ಅಭಿವೃದ್ಧಿ ಆಗಬೇಕಾಗಿದೆ ಶಾಸಕ ಎನ್ ವೈ ಗೋಪಾಲಕೃಷ್ಣ.

ನಾಯಕನಹಟ್ಟಿ:: ಮೇ.23.
ಶಿಕ್ಷಕರ ಬೇಡಿಕೆಗಳನ್ನು ಈಡೇರಿಸಲು ನಮ್ಮ ಸರ್ಕಾರ ಬದ್ಧವಾಗಿದೆ ಎಂದು ಶಾಸಕ ಎನ್ ವೈ ಗೋಪಾಲಕೃಷ್ಣ ಹೇಳಿದ್ದಾರೆ.

ಗುರುವಾರ ಹೋಬಳಿಯ ನೇರಲಗುಂಟೆ ಗ್ರಾಮದ ಶ್ರೀ ವೆಂಕಟೇಶ್ವರ ಗ್ರಾಮಾಂತರ ಪ್ರೌಢಶಾಲೆಯಲ್ಲಿ ಆಗ್ನೇಯ ಶಿಕ್ಷಕರ ಕ್ಷೇತ್ರದ ಚುನಾವಣೆಯ ಕಾಂಗ್ರೆಸ್ ಅಭ್ಯರ್ಥಿ ಡಿ. ಟಿ. ಶ್ರೀನಿವಾಸ್ ಪರ ಮತಯಾಚನೆಯ ಪ್ರಚಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು. ಶಿಕ್ಷಕರ ಬೇಡಿಕೆಯಂತೆ ಓಪಿಎಸ್ ಜಾರಿ ಮಾಡಲು ಮತ್ತು 7ನೇ ವೇತನ ಆಯೋಗದ ಸಿದ್ಧತೆ ಸರ್ಕಾರದ ಚಿಂತನೆಯಾಗಿದೆ ಶೈಕ್ಷಣಿಕ ಕಾರ್ಯಕ್ರಮಗಳಾಗಿ ಬಿಸಿಯೂಟ ಶೂ ಭಾಗ್ಯ ಕ್ಷೀರ ಭಾಗ್ಯ ಸೇರಿದಂತೆ ವಿದ್ಯಾರ್ಥಿಗಳ ಶಿಕ್ಷಣ ಪ್ರಗತಿ ಮತ್ತು ದಾಖಲೆ ಹೆಚ್ಚಳ ಆಗುವ ರೀತಿ ಯೋಜನೆಗಳನ್ನು ಜಾರಿ ಮಾಡಿರುವ ಕೀರ್ತಿ ಕಾಂಗ್ರೆಸ್ ಪಕ್ಷಕ್ಕೆ ಸಲ್ಲುತ್ತದೆ. ಸರ್ಕಾರಿ ಮತ್ತು ಖಾಸಗಿ ಶಾಲೆಗಳ ಗಂಭೀರ ಸಮಸ್ಯೆಗಳ ಪರಿಹಾರಕ್ಕೆ ಪಕ್ಷದ ಅಭ್ಯರ್ಥಿ ಡಿ .ಟಿ ಶ್ರೀನಿವಾಸ್ ಬೆಂಬಲಿಸಿ ಶಿಕ್ಷಕರು ಮತದಾನ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಪ್ರಾಸ್ತಾವಿಕ ನುಡಿಯನ್ನು ಶ್ರೀ ವೆಂಕಟೇಶ್ವರ ಗ್ರಾಮಾಂತರ ಪ್ರೌಢಶಾಲೆ ಆಡಳಿತ ಅಧಿಕಾರಿ ತಿಪ್ಪೇಸ್ವಾಮಿ ರೆಡ್ಡಿ ಮಾತನಾಡಿ ಶಾಸಕ ಎನ್ ವೈ ಗೋಪಾಲಕೃಷ್ಣರವರ ಕುಟುಂಬ ಶಿಕ್ಷಕ ವೃತ್ತಿಗೆ ಶ್ರಮಿಸಿದ ಅವರು ಶಾಸಕರಾದ ಸಮಯದಲ್ಲಿ ಅನೇಕ ಸರ್ಕಾರಿ ಪ್ರೌಢಶಾಲೆ ಗಳಿಗೆ ಅನುದಾನವನ್ನು ಮೀಸಲಿಟ್ಟು ಶಾಲೆಗಳನ್ನು ನಿರ್ಮಿಸಿದ್ದಾರೆ ರೇಖಲಗೆರೆ ಅಬ್ಬೇನಹಳ್ಳಿ ದೇವರಹಳ್ಳಿ ಗೌರಸಮುದ್ರ ತಿಮ್ಮಪ್ಪಯ್ಯನಹಳ್ಳಿ ಗ್ರಾಮಗಳಲ್ಲಿ ಸರ್ಕಾರಿ ಪ್ರೌಢಶಾಲೆಗಳು ಅನುದಾನವನ್ನ ನೀಡಿದ್ದಾರೆ. ರೈತರ ಅನುಕೂಲಕ್ಕಾಗಿ ಮೊನ್ನೆ ತಾನೆ ಹಿರೇಮಲ್ಲನವಳೆ ಜಿನಗಿ ಹಳ್ಳ ಚಾನಲ್ ನವೀಕರಣಕ್ಕೆ 5 ಕೋಟಿ ಅನುದಾನ ಬಿಡುಗಡೆ ಮಾಡಿ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತಿ ಸದಸ್ಯ ಬಾಲರಾಜ್, ಬಂಡೆ ಕಪಿಲೆ ಓಬಣ್ಣ, ನೇರಲಗುಂಟೆ ಸೂರನಾಯಕ, ಪ್ರಭುಸ್ವಾಮಿ, ತಳಕು ಮತ್ತು ನಾಯಕನಹಟ್ಟಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗೇಶ್ ರೆಡ್ಡಿ, ಮೊಳಕಾಲ್ಮುರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಟಿ ಕೆ ಕಲೀಂವುಲ್ಲಾ, ಶ್ರೀ ವೆಂಕಟೇಶ್ವರ ಗ್ರಾಮಾಂತರ ಪ್ರೌಢಶಾಲೆಯ ಆಡಳಿತ ಅಧಿಕಾರಿ ತಿಪ್ಪೇಸ್ವಾಮಿ ರೆಡ್ಡಿ, ಕಾರ್ಯದರ್ಶಿ ವೆಂಕಟೇಶ್ ರೆಡ್ಡಿ.
ಪಟ್ಟಣ ಪಂಚಾಯಿತಿ ಸದಸ್ಯ ಸೈಯದ್ ಅನ್ವರ್, ಡಾ. ತಿಪ್ಪೇಸ್ವಾಮಿ ಗೌಡಗೆರೆ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಕೆ ಎಂ ಶಿವಸ್ವಾಮಿ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ವೀರಭದ್ರಪ್ಪ, ಶಾಲೆಯ ಮುಖ್ಯ ಶಿಕ್ಷಕ ಆರ್ ಸತ್ಯನಾರಾಯಣ, ಚೌಳಕೆರೆ ಸಿ ಬಿ ಮೋಹನ್, ಬಗರ್ ಹುಕುಂ ಕಮಿಟಿ ಸದಸ್ಯ ಪಿ ಜಿ ಬೋರ ನಾಯಕ, ಕುದಾಪುರ ಕೆ ಜಿ ಪ್ರಕಾಶ್, ಶ್ರೀನಿವಾಸ್ ಜಿ ಬಿ ಮುದಿಯಪ್ಪ, ಎನ್ ದೇವರಹಳ್ಳಿ ಟಿ ರಾಜಣ್ಣ, ಹೋಬಳಿಯ ಎಲ್ಲಾ ಶಿಕ್ಷಕರು ಹಾಗೂ ಕಾರ್ಯಕರ್ತರು ಇದ್ದರು
[2:07 PM, 5/25/2024] ರಾಮುದೊಡ್ಮನೆ ಚಳ್ಳಕೆರೆ👍:

Namma Challakere Local News

You missed

error: Content is protected !!