ಚಳ್ಳಕೆರೆ ನ್ಯೂಸ್ :
ಬಯಲು ಸೀಮೆಯ ದಲಿತ ನಾಯಕ ಎಂದೇ ಹೆಸರಾದ ಮಾಜಿ ಸಚಿವ ಹೆಚ್. ಆಂಜನೇಯ ಅವರನ್ನು ಸರಕಾರದಲ್ಲಿ ಎಂಎಲ್ಸಿ ಮಾಡಬೇಕೆಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಪರಿವರ್ತನವಾದ) ರಾಜ್ಯ ಕಲಾಮಂಡಳಿ ವತಿಯಿಂದ ಹಾಗೂ ಜಿಲ್ಲಾ ಸಮಿತಿ, ತಾಲೂಕು ಸಮಿತಿ ವತಿಯಿಂದ ಒತ್ತಾಯಿಸಲಾಯಿತು.
ನಗರದ ಚಿತ್ರದುರ್ಗ ರಸ್ತೆಯ ಅಂಬೇಡ್ಕರ್ ವೃತ್ತದಲ್ಲಿ ಮಾಜಿ ಸಚಿವ ಹೆಚ್. ಆಂಜನೇಯ ರವರ ಪೋಟೋ ಹಿಡಿದು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಕಲಾಮಂಡಳಿ ರಾಜ್ಯಾಧ್ಯಕ್ಷರಾದ ಕೆ ಟಿ ಮುತ್ತುರಾಜ್, ಕರ್ನಾಟಕ ದಲಿತ ಸಂಘರ್ಷ ಸಮಿತಿ( ಪರಿವರ್ತನವಾದ) ಜಿಲ್ಲಾ ಅಧ್ಯಕ್ಷರಾದ ಹೆಗ್ಗೇರೆ ಮಂಜುನಾಥ್, ಅಂಜಿನಪ್ಪ, ಅಂಬೇಡ್ಕರ್ ನಗರ ಶ್ರಾವಣ ಕುಮಾರ್, ನನ್ನಿವಳ ನಾರಾಯಣಪುರ, ತಿಪ್ಪೇಸ್ವಾಮಿ ಇನ್ನೂ ಮುಂತಾದವರು ಹಾಜರಿದ್ದರು