ಚಳ್ಳಕೆರೆ ನ್ಯೂಸ್ :

ಬಯಲು ಸೀಮೆ ಚಳ್ಳಕೆರೆ ನಗರದಲ್ಲಿ
ರಾಜ ಕಾಲುವೆಗಳ ದುರಸ್ತಿ ಕಾಣದೆ ಮಳೆ ಬಂದ ಸಂಧರ್ಭದಲ್ಲಿ ರಾಜ ಕಾಲುವೆಗಳ ಮೂಲಕ ನೀರು ಖಾಸಗಿ ಲೇಔಟ್ ಗಳ ಮನೆಗಳಿಗೆ ನುಗ್ಗಿ ಹಾನಿ ಉಂಟುಮಾಡುತ್ತಿವೆ.

ಅದರಂತೆ ಚಳ್ಳಕೆರೆ ನಗರದ ವಾಲ್ಮೀಕಿ ನಗರದ ಕುವೆಂಪು ಶಾಲಾ ಪಕ್ಕದ ಲೇಔಟ್ ಗೆ ರಾಜಕಾಲುವೆ ನೀರು‌ ಖಾಸಗಿ ಮನೆಗಳಿಗೆ ನುಗ್ಗಿ ಇನ್ನೂ ಬಯಲು ಪ್ರದೇಶದಲ್ಲಿ ದೊಡ್ಡ ಹೊಂಡದಂತೆ ನೀರು ನಿಂತು ಸೊಳ್ಳೆಗಳ ತಾಣವಾಗಿ ಭಯಾನಕ ರೋಗಗಳ ಬೀತಿಯಲ್ಲಿ ಇಲ್ಲಿನ ಶಾಲಾ ಮಕ್ಕಳು ಹಾಗೂ ಮನೆಗಳ ನಿವಾಸಿಗಳು ‌ಇದ್ದಾರೆ.

ಕಳೆದ ವರ್ಷ ಬೆಂಗಳೂರು ಮಹಾ ನಗರಗಳಲ್ಲಿ ಸಂಭವಿಸಿದ ಅನಾಹುತಗಳ ಜೊತೆಗೆ ಸ್ಥಳೀಯವಾಗಿ ಹಲವಾರು ಸಮಸ್ಯೆಗಳು ತಲೆ ದೂರಿದವು ಎಂಬುದು ‌ಇಲ್ಲಿ ಸ್ಮರಿಸಬಹುದು.

ಕಳೆದ ವರ್ಷ ಮಳೆರಾಯನ ಆರ್ಭಟಕ್ಕೆ ನಗರದ ರಹಿಂನಗರ, ಅಜ್ಜನಗುಡಿ ರಸ್ತೆ ಮಾರ್ಗ, ಕಾಟಪನಹಟ್ಟಿ, ಪಾವಗಡ ರಸ್ತೆ, ರೈಲ್ವೆ ಸ್ಟೇಷನ್ ಹತ್ತಿರ, ಬೆಂಗಳೂರು ರಸ್ತೆ ಮಾರ್ಗದ ಹಲವು ಕಡೆಗಳಲ್ಲಿ ಹೂಳು ತುಂಬಿ ಹಲವಾರು ಮನೆಗಳಿಗೆ ಹಾನಿ ಉಂಟಾಗಿ ಜನರು ರಾತ್ರೋ ರಾತ್ರಿ ಮನೆ ತೊರೆದದ್ದು ಇಲ್ಲಿ ಮರುಕಳಿಸಬಹುದು.

ಕಳೆದ‌ಬಾರಿ ಕುದ್ದು ಸ್ಥಳೀಯ ಶಾಸಕರ ಸೂಚನೆ ಮೇರೆಗೆ ರಾತ್ರಿ ವೇಳೆ ನಗರಸಭೆ ಸಿಬ್ಬಂದಿ ಜೆಸಿಬಿ ಯಂತ್ರದ ಮೂಲಕ ಸ್ವಚ್ಚತೆಗೆ ಮುಂದಾಗಿರುವುದು ನೆನಪಿಸಿಕೊಳ್ಳಬಹುದು.

ಆದರೆ ಈ ಬಾರಿ ಮುಂಗಾರು ಮುನ್ನವೇ ವರುಣನ ಆರ್ಭಟ ಜೋರಾಗಿದೆ ಆದ್ದರಿಂದ ಸ್ಥಳೀಯ ಶಾಸಕರು ಹಾಗೂ ಆಡಳಿತಾಧಿಕಾರಿಯಾದ ಜಿಲ್ಲಾಧಿಕಾರಿಗಳು ಮಳೆ ನೀರು ನುಗ್ಗಿದ‌ಮೇಲೆ ಪರಿಹಾರ, ಮತ್ತೊಂದು ಎನ್ನುವ ಬದಲು ತುರ್ತಾಗಿ ಹಾನಿಯುಂಟುಮಾಡುವ ಪ್ರದೇಶಗಳನ್ನು ರಾಜ ಕಾಲುವೆಗಳನ್ನು ಗುರುತಿಸಿ ಸ್ವಚ್ಚತೆಗೆ ಮುಂದಾಗಬೇಕು ಎಂದು ಸಾರ್ವಜನಿಕರ ಒತ್ತಾಯವಾಗಿದೆ.

ಇನ್ನೂ ಈ ಬಗ್ಗೆ ಸಾರ್ವಜನಿಕರು ಮುಂದಾಗಬಹುದಾದ ಅನಾಹುತಗಳ ಬಗ್ಗೆ ನಗರಸಭೆ ಗಮನಕ್ಕೆ ತಂದರು ಕ್ಯಾರೆ ಎನ್ನದ ನಗರಸಭೆ ಅಧಿಕಾರಿಗಳು ನೆಪ ಮಾತ್ರಕ್ಕೆ , ಹಾಗೂ ಬಿಲ್ ಗಾಗಿ ಕಾಮಗಾರಿ ಎನ್ನುವಂತೆ ಮಾಡುತ್ತಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ದೂರಿದ್ದಾರೆ.

ಇನ್ನೂ ನಗರದಲ್ಲಿ ಹಾದು ಹೋದ ರಾಜ ಕಾಲುವೆಗಳ ಮಾಹಿತಿ ನಗರಸಭೆ ಇಂಜಿನಿಯರ್ ಗಳಿಗೆ ಇಲ್ಲವಾಗಿದೆ. ಮುಂಗಾರು ಮಳೆ ಪ್ರಾರಂಭವಾಗಿದೆ, ರಾಜ ಕಾಲುವೆಗಳಲ್ಲಿ ನೀರು ಸರಾಗವಾಗಿ ಹರಿಯಬೇಕಾದರೆ ಸ್ವಚ್ಚತೆ ಮುಖ್ಯ, ಆದರೆ ಅಂತಹ ದುರಸ್ತಿ ಮಾಡಬೇಕಾದ ಹಲವು ರಾಜಕಾಲುವೇಗಲು ಈಗಲು ಹೂಳು ತುಂಬಿದ್ದು ಅಕ್ಕ ಪಕ್ಕದ ಮನೆಗಳಿಗೆ ಹಾನಿಯುಂಟುಮಾಡುವ ಆತಂಕದಲ್ಲಿ ಸಾರ್ವಜನಿಕರು ವಾಸ ಮಾಡುತ್ತಿದ್ದಾರೆ.

ಇನ್ನಾದರೂ ಚಳ್ಳಕೆರೆ ನಗರಸಭೆ ಅಧಿಕಾರಿಗಳು ರಾಜಕಾಲುವೆಗಳ ದುರಸ್ಥಿಗೆ ಹಾಗೂ ಸ್ವಚ್ಚತೆಗೆ ಮುಂದಾಗುವರಾ ಕಾದು ನೋಡಬೇಕಿದೆ.

Namma Challakere Local News

You missed

error: Content is protected !!