ಚಳ್ಳಕೆರೆ ನ್ಯೂಸ್ :
ರೈತರ ಪರಿಹಾರದ ಹಣ ಸಾಲಕ್ಕೆ ಜಮಾ ಮಾಡಿದರೆ
ಶಿಸ್ತಿನ ಕ್ರಮ: ಡಿಸಿ
ಬರಗಾಲದ ಪರಿಹಾರವನ್ನು ಸರ್ಕಾರಗಳು ರೈತರ ಖಾತೆಗೆ
ಬಿಡುಗಡೆ ಮಾಡುತ್ತಿದ್ದು, ಅದನ್ನು ಬ್ಯಾಂಕ್ ನವರು,
ರೈತರ ಸಾಲಕ್ಕೆ
ಜಮಾ ಮಾಡುತ್ತಿರುವುದು ಕೇಳಿ ಬರುತ್ತಿದೆ. ಇದನ್ನು ಕೂಡಲೇ
ನಿಲ್ಲಿಸಬೇಕು.
ಸಾಲಕ್ಕೆ ಜಮಾ ಮಾಡಿಕೊಂಡ ಪರಿಹಾರದ
ಹಣ ವಾಪಾಸ್ಸು ಕೊಡಬೇಕು, ಇಲ್ಲದೆ ಹೋದರೆ ಆ ಬ್ಯಾಂಕ್
ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸಲಾಗುತ್ತದೆಂದು ಡಿ
ಸಿ ಟಿ. ವೆಂಕಟೇಶ್ ಎಚ್ಚರಿಸಿದರು.
ಅವರು ಚಿತ್ರದುರ್ಗ ದ ಜಿಲ್ಲಾ
ಪಂಚಾಯಿತಿ ಸಭಾಂಗಣದಲ್ಲಿ ಕೃಷಿ ಚಟುವಟಿಕೆ ಪೂರ್ವಭಾವಿ
ಸಭೆಯಲ್ಲಿ ಮಾತಾಡಿದರು